21Jun2024
COVID-19 Big Hearts Policy Update Calling All Climate Champions To Apply

No products in the cart.

Contacts

92 Bowery St., NY 10013

thepascal@mail.com

+1 800 123 456 789

ನಡೆದು ಬಂದ ದಾರಿ

ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಸಂಘ ಪ್ರವರ್ಧಮಾನಕ್ಕೆ ಬಂದಹಾಗೆ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿತು. ಸಂಘದ ಮುಖವಾಣಿಯಾಗಿದ್ದು, ಸಮಾಜ ಬಂದುಗಳ ಮತ್ತು ಸಂಘದ ನಡುವೆ ಸಂಪರ್ಕ ಸೇತುವೆ ಯಾಗಿ ಕಾರ್ಯನಿರ್ವಹಿಸುತ್ತಿರುವ ‘ವಿಪ್ರ ಭಾರತೀ’ ತ್ರೈಮಾಸಿಕ ಪತ್ರಿಕೆ. ಸಂಘದ ದೈನಂದಿನ ಆಗುಹೊಗುಗಳು ಸಮಾಜದಲ್ಲಿ ನಡೆದ ಪ್ರಚಲಿತ ವಿದ್ಯಮಾನಗಳನ್ನು ತಿಳಿಸಲು ಉತ್ತಮ ಸಂವಹನ ಮಾರ್ಗವಾಯಿತು. 1999 ರಲ್ಲಿ ಪ್ರಾರಂಭವಾಗಿದ್ದು 22 ನೇ ಸಂವತ್ಸರದಲ್ಲಿ ಮುನ್ನಡೆಯುತ್ತಾಇದೆ. ಇಲ್ಲಿಯವರೆಗೆ 86 ಸಂಚಿಕೆಗಳು ಪ್ರಕಟವಾಗಿದೆ. ಧರ್ಮ, ಸಂಸ್ಕೃತಿ , ಸಂಸ್ಕಾರ, ಆಚಾರ,ವಿಚಾರ ಗಳನ್ನು ಹೊಂದಿದ್ದು ಪತ್ರಿಕೆಯು ನಮ್ಮ ಸಮಾಜ ಬಾಂಧವರೆಲ್ಲರ ಮನೆಗೆ ತಲುಪಬೇಕು ಎಂಬುದು ನಮ್ಮ ಮೂಲ ಉದ್ದೇಶ. ಪ್ರಧಾನ ಸಂಪಾದಕರು ಮತ್ತು ಸಂಪಾದಕ ಮಂಡಳಿಯಿದ್ದು ವರ್ಷದಿಂದ ವರ್ಷಕ್ಕೆ ಉನ್ನತಿಯನ್ನು ಪಡೆಯುತ್ತಿದೆ.

ಸಂಪಾದಕ ಮಂಡಳಿ

 ಶ್ರೀಯುತ ಸಾಮಗ ರಾಮಸ್ವಾಮಿಯವರ ಸಂಪಾದಕತ್ವದಲ್ಲಿ ಪ್ರಾರಂಭಗೊಂಡಿದ್ದು ಈಗ ಶ್ರೀ ವಿ.ಆರ್ ಹೆಗಡೆ ಯವರು ಪ್ರಧಾನ ಸಂಪಾದಕರಾಗಿ, ಶ್ರೀ ವಿ ಗಣೇಶ ಉಡುಪ, ಶ್ರೀ ಹೆಚ್. ಎಂ ಕೃಷ್ಣ ಮೂರ್ತಿ, ಶ್ರೀಮತಿ ವಿನುತಾ ಮುರಳೀಧರ್ ಮತ್ತು ಶ್ರೀ ಶಿವರಾಮ್ ರವರು ಸಂಪಾದಕ ಮಂಡಳಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಾಇದ್ದಾರೆ.

ಸದಸ್ಯತ್ವ

ವಾರ್ಷಿಕ ಚಂದಾ ರೂಪಾಯಿ 80/- ಆಜೀವ ಪೋಷಕ ಸದಸ್ಯತ್ವದ ಶುಲ್ಕ ರೂಪಾಯಿ 1000/- ಪಾವತಿಮಾಡಿ ಸದಸ್ಯರಾಗಬಹುದು.

ವಿಪ್ರ ಭಾರತೀ ಪ್ರಸರಣ ಸಮಿತಿ

ನಮ್ಮ ತಾಲ್ಲೂಕಿನ ಎಲ್ಲಾ ವಿಪ್ರ ಭಾಂದವರಿಗೆ “ವಿಪ್ರಭಾರತೀ” ಪತ್ರಿಕೆಯು ತಲುಪ ಬೇಕು ಉತ್ತಮ ಗುಣ ಮಟ್ಟ , ಉತ್ತಮ ಲೇಖನದೊಂದಿಗೆ ಪತ್ರಿಕೆ ಪ್ರಕಟವಾಗಬೇಕು ಎಂಬ ಘನ ಉದ್ದೇಶದಿಂದ ಪ್ರಧಾನ ಸಂಪಾದಕರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಈಗಾಗಲೇ ಕಾರ್ಯ ನಿರ್ವಹಿಸುತ್ತಾ ಇದೆ. ವಿಪ್ರಭಾರತಿ ಪತ್ರಿಕೆ ನಿಮ್ಮದು. ಇದನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಸದಸ್ಯರಿಗೆ ತಲುಪುವಂತೆ ಮಾಡಲು ಸಹಕರಿಸಿ ಮತ್ತು ನಿಮ್ಮ ಬಂಧು ಮಿತ್ರರನ್ನು ವಿಪ್ರಭಾರತಿಯ ಅಜೀವ ಚಂದಾದಾರರನ್ನಾಗಿಸುವ ಮೂಲಕ ಸಹಕಾರ ಕೋರಿದೆ.ಜಾಹೀರಾತುಗಳಿಗೆ ಅವಕಾಶವಿದೆ.  ಶ್ರೀ ವಿ ಆರ್. ಹೆಗಡೆಯವರು ಸಂಚಾಲಕರು ಕಾರ್ಯದರ್ಶಿಯಾಗಿ ಶ್ರೀ ನರಸಿಂಹಭಟ್, ನಿರ್ದೇಶಕರುಗಳಾಗಿ ಡಾ॥ ಎನ್. ಎಸ್. ಮನೋಹರ್ ರಾವ್, ಶ್ರೀ ಜಿ. ಎಸ್. ನಾರಾಯಣ ರಾವ್, ಶ್ರೀ ಕೆ. ವಿ. ಸತ್ಯನಾರಾಯಣ ರಾವ್, ಶ್ರೀ ವಿ. ಸತೀಶ್ ಮತ್ತು ಶ್ರೀ ಕೆ. ಎಸ್. ಹರೀಶ್ ಇರುತ್ತಾರೆ.