1991 ರಲ್ಲಿ ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಪ್ರಾರಂಭವಾಗಿ ತಾಲ್ಲೂಕಿನಾದ್ಯಂತ ತನ್ನ ಚಟುವಟಿಕೆಯನ್ನು ವಿಸ್ತಾರಗೊಳಿಸಿದ್ದು ಸಮಾಜ ಬಾಂಧವರ ಒಮ್ಮತದ ಅಭಿಪ್ರಾಯದಂತೆ ಸಂಘಕ್ಕೆ ವಿಪ್ರಭಾಂದವರ ಎಲ್ಲಾ ಷೋಡಶ ಕಾರ್ಯಗಳನ್ನು ಅನುಕೂಲವಾಗುವಂತೆ ನಡೆಸಲು ಮತ್ತು ಬ್ರಾಹ್ಮಣ ಸಂಘದ ಆಡಳಿತ ಇತರೆ ಚಟುವಟಿಕೆಗಳನ್ನು ನಡೆಸಲು. ವ್ಯವಸ್ಥಿತವಾದ ಮಂದಿರದ ಅಗತ್ಯವಿದೆ ಎಂದು ತೀರ್ಮಾನಿಸಿ 1996 ರಲ್ಲಿ ಗಾಯತ್ರಿ ಮಂದಿರದ ನಿರ್ಮಾಣಕ್ಕೆ ಸಮಾಜ ಬಾಂಧವರು ಕಟ್ಟಡನಿರ್ಮಾಣಕ್ಕೆ ಬುನಾದಿ ಹಾಕಿದ್ದು 1999 ರಲ್ಲಿ ಬಳಕೆಗೆ ಸಿದ್ಧಗೊಂಡಿತು. ಆಧುನಿಕ ಸೌಲಭ್ಯದೊಂದಿಗೆ ಸುಮಾರು 2-3 ಸಾವಿರ ಜನರಿಗೆ ವ್ಯವಸ್ಥೆಮಾಡಬಹುದಾಗಿರುತ್ತದೆ. ತಾಲ್ಲೂಕಿನ ವಿಪ್ರರ ದೇಣಿಗೆ ರೂ. 60 ಲಕ್ಷ ಮೀರಿದ್ದು ದಾನಿಗಳ ಔದಾರ್ಯವನ್ನು ತೋರಿಸುತ್ತದೆ. ಕಟ್ಟಡ ನಿಮಾಣಕ್ಕೆ ವೆಚ್ಚವಾಗಿರುವ ಮೊಬಲಗು ಸುಮಾರು ಒಂದು ಕೋಟಿ ರೂಪಾಯಿಗೂ ಮೀರಿದೆ. ಗಾಯತ್ರೀ ಮಂದಿರ ತಾಲ್ಲೂಕಿನ ವಿಪ್ರ ಬಾಂಧವರ ಶಕ್ತಿ ಕೇಂದ್ರವಾಗಿದೆ. ಹಾಗೂ ಸುತ್ತಲಿನ ನಾಲ್ಕಾರು ತಾಲ್ಲೂಕಿನಲ್ಲಿ ಎಲ್ಲೂ ಇಲ್ಲದ ವಿಶಾಲವಾದ, ಭವ್ಯವಾದ ಮಂದಿರವಾಗಿದೆ.
ಮಂದಿರದ ನಿಯಮಗಳು
ಗಾಯತ್ರೀ ಮಂದಿರವನ್ನು ಕಾರ್ಯಕ್ರಮಗಳಿಗಾಗಿ 2 ತಿಂಗಳು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು. ನಮ್ಮ ಸಮಾಜ ಬಾಂಧವರಿಗೆ ಮಾತ್ರ ಇದರಲ್ಲಿ ವಿನಾಯತಿ ಇದೆ.
೧. ಮಾಂಸಹಾರ / ಮದ್ಯಪಾನ/ಧೂಮಪಾನ ಸಂಪೂರ್ಣವಾಗಿ ನಿಷೇದಿಸಲಾಗಿದೆ
೨. ಅಪರ / ಪಿತೃ ಕಾರ್ಯ ಮಾಡುಬವವರು ೧೫ ದಿನ ಮುಂಚಿತವಾಗಿ ಕಾಯ್ದಿರಿಸಿ ಕೊಳ್ಳಬಹುದು (ಲಭ್ಯತೆಗೆ ಅನುಗುಣವಾಗಿ)
೩. ಇತರೆ ನಿಯಮಗಳನ್ನು ಮಂದಿರದ ಕಛೇರಿಯಲ್ಲಿ ಪಡೆಯಬಹುದು.
ಮಂದಿರದ ಸೌಲಭ್ಯಗಳು
ನಮ್ಮ ಸಮಾಜ ಭಾಂಧವರು ನಡೆಸುವ ಷೋಡಶ ಕರ್ಮಗಳ ಆಚರಿಸುವ ಸಲುವಾಗಿ ನಿರ್ಮಾಣ ಮಾಡಿದೆ. ಮದುವೆ, ಸಮಾರಂಭಗಳಿಗೆ ಮಂಟಪ ಸಹಿತ ವೇದಿಕೆ ಸಭೆ ಸಮಾರಂಭಗಳಿಗಾಗಿ ವಿಶಾಲವಾದ ಸಭಾಂಗಣ, ಅನ್ನಪೂರ್ಣ ಭೋಜನ ಶಾಲೆ, ವೈಶ್ವಾನರ, ಆರಾಧನಾ ಸಭಾಂಗಣಗಳೂ, ಪಿತೃಸದನ, ಎಲ್ಲಾ ವ್ಯವಸ್ಥೆಗಳಿರುವ ಅಡಿಗೆ ಮನೆ, ವಧು, ವರರಿಗೆ ಪ್ರತ್ಯೇಕವಾದ ಕೊಠಡಿಗಳು ಮತ್ತು ಶೌಚಾಲಯದ ವ್ಯವಸ್ಥೆಗಳಿರುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ವಸತಿ ಸಮುಚ್ಚಯದಲ್ಲಿ ಕೊಠಡಿಗಳ ವ್ಯವಸ್ಥೆ ಇರುತ್ತದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಿ.ಸಿ. ಕ್ಯಾಮರದ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಅನ್ನಪೂರ್ಣ ಭೋಜನಶಾಲೆಯಲ್ಲಿ ಅನ್ನಪೂರ್ಣ ಪೂಜಾಗೃಹವಿದ್ದು, ಗಾಯತ್ರೀ ಮಂದಿರದ ಆರಾದ್ಯ ದೇವರು ಎಂದರೆ ತಪ್ಪಾಗಲಾರದು, ಗಾಯತ್ರೀ ಮಂದಿರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಾದರೂ ಇಲ್ಲಿ ಮೊದಲು ಫಲ ಸಮರ್ಪಣೆಮಾಡುವುದು ವಾಡಿಕೆಯಾಗಿದೆ. ಈ ಪೂಜಾಗೃಹವನ್ನು ಹೊರನಾಡಿನ ಶ್ರೀ ಭೀಮೇಶ್ವರ ಜೋಷಿಗಳು ಉದ್ಘಾಟಿಸಿರುವುದು ಸಂತಸದ ಸಂಗತಿಯಾಗಿದೆ. ಶರನ್ನ ನವರಾತ್ರೀ ಹಾಗೂ ವಸಂತ ನವರಾತ್ರೀ ಕಾರ್ಯಕ್ರಮಗಳು ನಡೆಯುತ್ತವೆ.
ಆಡಳಿತ
ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಪ್ರಸಕ್ತ ವರ್ಷದ ಆಡಳಿತ ಮಂಡಳಿಯು ಗಾಯತ್ರೀ ಮಂದಿರದ ಆಡಳಿತವನ್ನು ನಿರ್ವಹಿಸುತ್ತದೆ. ಸಂಘದ ಉದ್ಯೋಗಿಗಳು ಮಂದಿರದ ಕಾಯ್ದಿರಿಸುವಿಕೆ, ನಿರ್ವಹಣೆ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಆಡಳಿತ ಮಂಡಳಿಯವರಿಗೆ ಹಾಗು ಸಂಘದ ಕಾರ್ಯ ನಿರ್ವಾಹಕರಿಗೆ ಪ್ರತ್ಯೇಕವಾಗಿ ಆಡಳಿತ ಕಛೇರಿ ವ್ಯವಸ್ಥೆ ಇರುತ್ತದೆ.
ಮ್ಯಾನೇಜರ್
ಆಡಳಿತ ಸಹಾಯಕರು
ಗಾಯತ್ರೀ ವಸತಿ ಸಮುಚ್ಚಯ
ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಸಂಘದ ರಜತ ಮಹೊತ್ಸವದ ಆಚರಣೆ ನೆನಪಿಗಾಗಿ ಗಾಯತ್ರೀ ಮಂದಿರದ ಬಲ ಬಾಗದಲ್ಲಿ ಗಾಯತ್ರೀ ವಸತಿ ಸಮುಚ್ಚಯದ ನಿರ್ಮಾಣ ಮಾಡಲಾಯಿತು. ಮುಖ್ಯವಾಗಿ ಗಾಯತ್ರೀ ಮಂದಿರದಲ್ಲಿ ಕೊಠಡಿಗಳ ಕೊರತೆಇದ್ದು ಸಮಾರಂಭಕ್ಕೆ ಆಗಮಿಸಿದವರು ಕೊಠಡಿಗಳಿಗಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳ ಬೇಕಾಗಿದ್ದು ಇದರ ನಿರ್ಮಾಣದಿಂದಾಗಿ ಆ ಕೊರತೆಯನ್ನು ಪರಿಹರಿಸಲಾಗಿದೆ.
ಆಧುನಿಕ ಸೌಲಭ್ಯದೊಂದಿಗೆ ವಿಶಾಲವಾದ 7 ಕೊಠಡಿ ಮತ್ತು 1 ಸಭಾಂಗಣವನ್ನು ಕಟ್ಟಲಾಗಿದೆ. ಚಿಕ್ಕ ಚಿಕ್ಕ ಕಾರ್ಯ ಕ್ರಮಮಾಡಲು ಅನುಕೂಲವಾಗುವಂತೆ ಪ್ರತ್ಯೇಕವಾದ ಅಡುಗೆ ಕೊಠಡಿ ಇರುತ್ತದೆ. ಗಾಯತ್ರೀ ವಸತಿ ಸಮುಚ್ಚಯದ ನಿರ್ಮಾಣಕ್ಕೆ ನಮ್ಮ ತಾಲ್ಲೂಕಿನ ಉದ್ಯಮಿಗಳಾದ ಹಾಲಿ ತುಮಕೂರಿನಲ್ಲಿ ನೆಲಸಿರುವ ಹೊದಲದ ಶ್ರೀಮತಿ ಶಶಿಕಲಾ ಶ್ರೀ ಹೆಚ್.ಜಿ. ಚಂದ್ರಶೇಖರ್ ಇವರು ಹತ್ತು ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದು ಸಭಾಂಗಣಕ್ಕೆ “ಶ್ರೀಮತಿ ಶಶಿಕಲಾ ಶ್ರೀ ಹೆಚ್.ಜಿ. ಚಂದ್ರಶೇಖರ್” ಸಭಾಂಗಣ ಎಂದು ನಾಮಕರಣ ಮಾಡಲಾಗಿದೆ ಮತ್ತು ಸಮಾಜದ ದಾನಿಗಳು ಮತ್ತು ಹಿತೈಷಿಗಳನೆರವಿನಿಂದಾಗಿ 7 ಕೊಠಡಿಗಳನ್ನು ನಿರ್ಮಾಣಮಾಡಲಾಯಿತು. ಎರಡು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಶ್ರೀಮತಿ ಸರಸ್ವತಿ ಶ್ರೀ ಕೆ.ವಿ.ಸತ್ಯನಾರಾಯಣ ರಾವ್, ಜಿಲ್ಲಾ ಬ್ರಾಹ್ಮಣ ಮಹಾ ಸಭಾ(ರಿ) ಶಿವಮೊಗ್ಗ, ಹೇಮಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ತೀರ್ಥಹಳ್ಳಿ 2017-2018 ನೇ ಸಾಲಿನ ಆಡಳಿತ ಮಂಡಳಿ,ಹೋಸ್ತೋಟ ಶ್ರೀನಿವಾಸ ಭಟ್ಟರ ಮಕ್ಕಳು ಬಳಗೋಡು, ಶ್ರೀಮತಿ ಅಹಲ್ಯಾ ಶ್ರೀ ಬಿ.ಕೆ.ಗಣೇಶ ಮತ್ತು ಮಕ್ಕಳು ಕಾಸರವಳ್ಳಿ,ಶ್ರೀವೈ.ತಿಪ್ಪಾಜೋಯಿಸ್, ವೈ.ಟಿ.ವಿ.ಜೋಯಿಸ್ ತೀರ್ಥಹಳ್ಳಿ ಮತ್ತು ಶ್ರೀಮತಿ ದೀಪಾ ಶ್ರೀ ಪ್ರದೀಪ ತೀರ್ಥಹಳ್ಳಿ ಈ ಮಹನೀಯರ ಹೆಸರನ್ನು ಕೊಠಡಿಗೆ ನಾಮಕರಣ ಮಾಡಲಾಯಿತು.
ಗಾಯತ್ರೀ ಮಂದಿರಕ್ಕೆ ಭೇಟಿ ನೀಡಿದ ಗುರುವರ್ಯರು
ಶ್ರೀ ಶ್ರೀ ಭಾರತೀ ತೀರ್ಥ ಶ್ರೀ ಪಾದಂಗಳವರು, ಶೃಂಗೇರಿ
ಶ್ರೀ ಶ್ರೀ ವಿಧುಶೇಖರ ಶ್ರೀ ಪಾದಂಗಳವರು, ಶೃಂಗೇರಿ
ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು, ಪೇಜಾವರಮಠ ಉಡುಪಿ
ಶ್ರೀ ಶ್ರೀ ರಾಘವೇಶ್ವರ ಶ್ರೀ ಪಾದಂಗಳವರು, ರಾಮಚಂದ್ರಾಪುರಮಠ
ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀ ಪಾದಂಗಳವರು, ಹರಿಹರಪುರ