No products in the cart.

Contacts

92 Bowery St., NY 10013

thepascal@mail.com

+1 800 123 456 789

ಶೈಕ್ಷಣಿಕ ದತ್ತಿ ನಿಧಿ:- ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಿನ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ/ನಿಯರಿಗೆ ಶೈಕ್ಷಣಿಕ ದತ್ತಿ ನಿಧಿಯಿಂದ ಧನ ಸಹಾಯ ನೀಡಲಾಗುವುದು. ಈ ಉದ್ದೇಶಕ್ಕಾಗಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲಾಗಿದೆ. ಹಾಲಿ ಇರುವ ನಿಯಮಾನುಸಾರ ಅರ್ಹರನ್ನು ಆಯ್ಕೆ ಮಾಡಲಾಗುವುದು.

ಪ್ರತಿಭಾ ಪುರಸ್ಕಾರ:- ತಾಲ್ಲೂಕಿನ ನಮ್ಮ ಸಮಾಜ ಭಾಂದವರು, ಶಿಕ್ಷಣ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾದನೆ ಮಾಡಿದವರು, ರಕ್ಷಣಾ ಪಡೆಯಲ್ಲಿ ನೇಮಕಾತಿ ಹೊಂದಿದವರು, ಉನ್ನತ ವ್ಯಾಸಂಗಕ್ಕಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದವರು ಮತ್ತು ರಾಜ್ಯ/ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಾತಿ ಹೊಂದಿದವರನ್ನು ಹಾಲಿ ಇರುವ ನಿಯಮಾನುಸಾರ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು.

ಹಿರಿಯರಿಗೆ ಸನ್ಮಾನ:- ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ತಾಲ್ಲೂಕಿನ ವಿಪ್ರರನ್ನು ಸನ್ಮಾನಿಸಲಾಗುವುದು.

ಆರೋಗ್ಯ ನಿಧಿ:- ತಾಲ್ಲೂಕಿನ ನಮ್ಮ ಸಮಾಜ ಬಾಂಧವರು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದರೆ, ಅನಾರೋಗ್ಯ ಪೀಡಿತರಾದರೆ, ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ರೂ.25000/-ಗಳವರೆಗೆ ಧನಸಹಾಯ ಮಾಡುವುದು. ಇದಕ್ಕಾಗಿ ಒಂದು ಉಪ ಸಮಿತಿಯನ್ನು ರಚಿಸಲಾಗಿದೆ. ಅರೋಗ್ಯ ನಿಧಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸಮಿತಿಯು ನಿರ್ವಹಿಸುತ್ತದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ:- ಆರ್ಥಿಕವಾಗಿ ಹಿಂದುಳಿದ ಸಮಾಜದ ಬಾಂಧವರಿಗೆ ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸಹಾಯ ನೀಡುವುದು. 2020ರ ಕರೋನಾ ಅವದಿಯಲ್ಲಿ 120 ಜನರಿಗೆ ತಲಾ ರೂ 1000/- ದಂತೆ ರೂ 120000/-  ಗಳನ್ನು ಗಾಯತ್ರಿ ಮಂದಿರಕ್ಕೆ ಸದಾ ಕೆಲಸಕ್ಕೆ ಬರುತಿದ್ದ 13ಜನ ಕಾರ್ಮಿಕರಿಗೆ ತಲಾ ರೂ. 500ರಂತೆ 6500/- ಗಳನ್ನು ವಿತರಿಸಲಾಯಿತು. 2021ನೇ ಸಾಲಿನಲ್ಲಿ ತಲಾ ರೂ 1000ರಂತೆ 120 ಜನರಿಗೆ ರೂ. 12000/- ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪೂರ್ವಾದ್ಯಕ್ಷರಾದ ಶ್ರೀ ಕೂಳೂರು ಸತ್ಯನಾರಾಯಣರಾವ್ ರವರು ಆರ್ಥಿಕವಾಗಿ ಹಿಂದುಳಿದ ತಾಲೂಕಿನ 120 ಜನರಿಗೆ ತಲಾ ರೂ 200ಗಳ ಉಚಿತ ವೈಧ್ಯಕೀಯ ಕೂಪನ್ ಗಳನ್ನು ನೀಡಿರುತ್ತಾರೆ.