ಶೈಕ್ಷಣಿಕ ದತ್ತಿ ನಿಧಿ
ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಿನ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ/ನಿಯರಿಗೆ ಶೈಕ್ಷಣಿಕ ದತ್ತಿ ನಿಧಿಯಿಂದ ಧನ ಸಹಾಯ ನೀಡಲಾಗುವುದು. ಈ ಉದ್ದೇಶಕ್ಕಾಗಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲಾಗಿದೆ. ಹಾಲಿ ಇರುವ ನಿಯಮಾನುಸಾರ ಅರ್ಹರನ್ನು ಆಯ್ಕೆ ಮಾಡಲಾಗುವುದು.
meta-box
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home/u682367217/domains/brahmanasanghatth.com/public_html/wp-includes/functions.php on line 6114No products in the cart.
ಶಾಶ್ವತ ಅಭಿವೃದ್ಧಿ ಸಮಿತಿ ಸದಸ್ಯರು, ತಾಲ್ಲೂಕು ಪ್ರತಿನಿಧಿಗಳು, ಕಾರ್ಯಕಾರಿ ಸಮಿತಿಸದಸ್ಯರು, ಅಧ್ಯಕ್ಷರು ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಕಾರ್ಯದರ್ಶಿಗಳು
1991 ರ ಜನವರಿ ತಿಂಗಳಿನಲ್ಲಿ ನಟ ರತ್ನಾಕರ ಮಾಸ್ಟರ್ ಶ್ರೀ ಹಿರಣ್ಣಯ್ಯನವರು ತೀರ್ಥಹಳ್ಳಿಯಲ್ಲಿ ಮೊಕ್ಕಾಂ ಮಾಡಿದ್ದರು.
ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಿನ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ/ನಿಯರಿಗೆ ಶೈಕ್ಷಣಿಕ ದತ್ತಿ ನಿಧಿಯಿಂದ ಧನ ಸಹಾಯ ನೀಡಲಾಗುವುದು.
1991 ರಲ್ಲಿ ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಪ್ರಾರಂಭವಾಗಿ ತಾಲ್ಲೂಕಿನಾದ್ಯಂತ ತನ್ನ ಚಟುವಟಿಕೆಯನ್ನು ವಿಸ್ತಾರಗೊಳಿಸಿದ್ದು ಸಮಾಜ ಬಾಂಧವರ ಒಮ್ಮತದ ಅಭಿಪ್ರಾಯದಂತೆ ಸಂಘಕ್ಕೆ ವ್ಯವಸ್ಥಿತವಾದ ಮಂದಿರದ ಅಗತ್ಯವಿದೆ ಎಂದು ತೀರ್ಮಾನಿಸಿ 1996 ರಲ್ಲಿ ಗಾಯತ್ರಿ ಮಂದಿರದ ನಿರ್ಮಾಣಕ್ಕೆ ಸಮಾಜ ಬಾಂಧವರು ಕಟ್ಟಡನಿರ್ಮಾಣಕ್ಕೆ ಬುನಾದಿ ಹಾಕಿದ್ದು 1999 ರಲ್ಲಿ ಬಳಕೆಗೆ ಸಿದ್ಧಗೊಂಡಿತು. ಆಧುನಿಕ ಸೌಲಭ್ಯದೊಂದಿಗೆ ಸುಮಾರು 2-3 ಸಾವಿರ ಜನರಿಗೆ ವ್ಯವಸ್ಥೆಮಾಡಬಹುದಾಗಿರುತ್ತದೆ. ತಾಲ್ಲೂಕಿನ ವಿಪ್ರರ ದೇಣಿಗೆ ರೂ. 60 ಲಕ್ಷ ಮೀರಿದ್ದು ದಾನಿಗಳ ಔದಾರ್ಯವನ್ನು ತೋರಿಸುತ್ತದೆ. ಕಟ್ಟಡ ನಿಮಾಣಕ್ಕೆ ವೆಚ್ಚವಾಗಿರುವ ಮೊಬಲಗು ಸುಮಾರು ಒಂದು ಕೋಟಿ ರೂಪಾಯಿಗೂ ಮೀರಿದೆ. ಗಾಯತ್ರೀ ಮಂದಿರ ತಾಲ್ಲೂಕಿನ ವಿಪ್ರ ಬಾಂಧವರ ಶಕ್ತಿ ಕೇಂದ್ರವಾಗಿದೆ. ಹಾಗೂ ಸುತ್ತಲಿನ ನಾಲ್ಕಾರು ತಾಲ್ಲೂಕಿನಲ್ಲಿ ಎಲ್ಲೂ ಇಲ್ಲದ ವಿಶಾಲವಾದ, ಭವ್ಯವಾದ ಮಂದಿರವಾಗಿದೆ.
ನಮ್ಮ ಸಮಾಜ ಭಾಂಧವರು ನಡೆಸುವ ಷೋಡಶ ಕರ್ಮಗಳ ಆಚರಿಸುವ ಸಲುವಾಗಿ ನಿರ್ಮಾಣ ಮಾಡಿದೆ. ಮದುವೆ, ಸಮಾರಂಭಗಳಿಗೆ ಮಂಟಪ ಸಹಿತ ವೇದಿಕೆ ಸಭೆ ಸಮಾರಂಭಗಳಿಗಾಗಿ ವಿಶಾಲವಾದ ಸಭಾಂಗಣ, ಅನ್ನಪೂರ್ಣ ಭೋಜನ ಶಾಲೆ, ವೈಶ್ವಾನರ, ಆರಾಧನಾ ಸಭಾಂಗಣಗಳೂ, ಪಿತೃಸದನ, ಎಲ್ಲಾ ವ್ಯವಸ್ಥೆಗಳಿರುವ ಅಡಿಗೆ ಮನೆ, ವಧು, ವರರಿಗೆ ಪ್ರತ್ಯೇಕವಾದ ಕೊಠಡಿಗಳು ಮತ್ತು ಶೌಚಾಲಯದ ವ್ಯವಸ್ಥೆಗಳಿರುತ್ತದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಿ.ಸಿ. ಕ್ಯಾಮರದ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಗಾಯತ್ರೀ ಮಂದಿರವನ್ನು ಕಾರ್ಯಕ್ರಮಗಳಿಗಾಗಿ 2 ತಿಂಗಳು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು. ನಮ್ಮ ಸಮಾಜ ಬಾಂಧವರಿಗೆ ಮಾತ್ರ ಇದರಲ್ಲಿ ವಿನಾಯತಿ ಇದೆ ಇತರೆ ನಿಯಮಗಳನ್ನು ಕಚೇರಿಯಲ್ಲಿ ಪಡೆಯಬಹುದು.
ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಿನ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ/ನಿಯರಿಗೆ ಶೈಕ್ಷಣಿಕ ದತ್ತಿ ನಿಧಿಯಿಂದ ಧನ ಸಹಾಯ ನೀಡಲಾಗುವುದು. ಈ ಉದ್ದೇಶಕ್ಕಾಗಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲಾಗಿದೆ. ಹಾಲಿ ಇರುವ ನಿಯಮಾನುಸಾರ ಅರ್ಹರನ್ನು ಆಯ್ಕೆ ಮಾಡಲಾಗುವುದು.
ತಾಲ್ಲೂಕಿನ ನಮ್ಮ ಸಮಾಜ ಭಾಂದವರು, ಶಿಕ್ಷಣ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾದನೆ ಮಾಡಿದವರು, ರಕ್ಷಣಾ ಪಡೆಯಲ್ಲಿ ನೇಮಕಾತಿ ಹೊಂದಿದವರು, ಉನ್ನತ ವ್ಯಾಸಂಗಕ್ಕಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದವರು ಮತ್ತು ರಾಜ್ಯ/ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಾತಿ ಹೊಂದಿದವರನ್ನು ಹಾಲಿ ಇರುವ ನಿಯಮಾನುಸಾರ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು.
ತಾಲ್ಲೂಕಿನ ನಮ್ಮ ಸಮಾಜ ಬಾಂಧವರು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದರೆ, ಅನಾರೋಗ್ಯ ಪೀಡಿತರಾದರೆ, ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ರೂ.25000/-ಗಳವರೆಗೆ ಧನಸಹಾಯ ಮಾಡುವುದು. ಇದಕ್ಕಾಗಿ ಒಂದು ಉಪ ಸಮಿತಿಯನ್ನು ರಚಿಸಲಾಗಿದೆ. ಅರೋಗ್ಯ ನಿಧಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸಮಿತಿಯು ನಿರ್ವಹಿಸುತ್ತದೆ.
ಆರ್ಥಿಕವಾಗಿ ಹಿಂದುಳಿದ ಸಮಾಜದ ಬಾಂಧವರಿಗೆ ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸಹಾಯ ನೀಡುವುದು. 2020ರ ಕರೋನಾ ಅವದಿಯಲ್ಲಿ 120 ಜನರಿಗೆ ತಲಾ ರೂ 1000/- ದಂತೆ ರೂ 120000/- ಗಳನ್ನು ಗಾಯತ್ರಿ ಮಂದಿರಕ್ಕೆ ಸದಾ ಕೆಲಸಕ್ಕೆ ಬರುತಿದ್ದ 13ಜನ ಕಾರ್ಮಿಕರಿಗೆ ತಲಾ ರೂ. 500ರಂತೆ 6500/- ಗಳನ್ನು ವಿತರಿಸಲಾಯಿತು. 2021ನೇ ಸಾಲಿನಲ್ಲಿ ತಲಾ ರೂ 1000ರಂತೆ 120 ಜನರಿಗೆ ರೂ. 12000/- ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪೂರ್ವಾದ್ಯಕ್ಷರಾದ ಶ್ರೀ ಕೂಳೂರು ಸತ್ಯನಾರಾಯಣರಾವ್ ರವರು ಆರ್ಥಿಕವಾಗಿ ಹಿಂದುಳಿದ ತಾಲೂಕಿನ 120 ಜನರಿಗೆ ತಲಾ ರೂ 200ಗಳ ಉಚಿತ ವೈಧ್ಯಕೀಯ ಕೂಪನ್ ಗಳನ್ನು...
1992-93 ನೇ ಸಾಲಿನಲ್ಲಿ ವಧೂ-ವರರ ಅನ್ವೇಷಾಣಾ ಕೇಂದ್ರವನ್ನು ಪ್ರಾರಂಭಿಸಿದ್ದು ಸುಮಾರು 100 ಜನ ಅವಿವಾಹಿತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಹಲವು ವರ್ಷಗಳವರೆವಿಗೂ ಕಾರ್ಯನಿರ್ವಹಿಸಿ ಕಾಲಕ್ರಮೇಣ ಸ್ಥಗಿತವಾಗಿದ್ದು ಪುನಃ ಆರಂಬಿಸುವ ಯೋಜನೆ ಇದೆ
ನಮ್ಮ ಸಮಾಜದ ನಿರುದ್ಯೋಗಿ ಯುವಕ/ಯುವತಿಯರಿಗೆ ಕೇಂದ್ರ/ ರಾಜ್ಯ/ ಖಾಸಗಿ ವಲಯದಲ್ಲಿರುವ ಉದ್ಯೋಗಾವಕಾಶಗಳು/ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡುವುದು ಸ್ವಯಂ ಉದ್ಯೋಗ ಪ್ರಾರಂಬಿಸುವವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದು.
ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ವಿಪ್ರ ಬಾರತೀ ಪತ್ರಿಕೆಯ ಗುಣಮಟ್ಟ/ ಉತ್ತಮ ಲೇಖನಗಳೊಂದಿಗೆ ಇ- ಆವೃತ್ತಿಯನ್ನು ಪ್ರಕಟಿಸಿ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ ಘನ ಉದ್ದೇಶವಾಗಿದೆ.
BigHearts is the largest global crowdfunding community connecting nonprofits
We help donors make safe and easy US tax-deductible donations to vetted, locally-driven organizations around the world. Donations are tax-deductible in the US, or UK taxpayers can give in GBP and claim an extra 25% if Gift Aid eligible.