


ನಡೆದು ಬಂದ ದಾರಿ:-ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಸಂಘ ಪ್ರವರ್ಧಮಾನಕ್ಕೆ ಬಂದಹಾಗೆ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿತು. ಸಂಘದ ಮುಖವಾಣಿಯಾಗಿದ್ದು, ಸಮಾಜ ಬಂದುಗಳ ಮತ್ತು ಸಂಘದ ನಡುವೆ ಸಂಪರ್ಕ ಸೇತುವೆ ಯಾಗಿ ಕಾರ್ಯನಿರ್ವಹಿಸುತ್ತಿರುವ ‘ವಿಪ್ರ ಭಾರತೀ’ ತ್ರೈಮಾಸಿಕ ಪತ್ರಿಕೆ. ಸಂಘದ ದೈನಂದಿನ ಆಗುಹೊಗುಗಳು ಸಮಾಜದಲ್ಲಿ ನಡೆದ ಪ್ರಚಲಿತ ವಿದ್ಯಮಾನಗಳನ್ನು ತಿಳಿಸಲು ಉತ್ತಮ ಸಂವಹನ ಮಾರ್ಗವಾಯಿತು. 1999 ರಲ್ಲಿ ಪ್ರಾರಂಭವಾಗಿದ್ದು 22 ನೇ ಸಂವತ್ಸರದಲ್ಲಿ ಮುನ್ನಡೆಯುತ್ತಾಇದೆ. ಇಲ್ಲಿಯವರೆಗೆ 86 ಸಂಚಿಕೆಗಳು ಪ್ರಕಟವಾಗಿದೆ. ಧರ್ಮ, ಸಂಸ್ಕøತಿ, ಸಂಸ್ಕಾರ, ಆಚಾರ,ವಿಚಾರ ಗಳನ್ನು ಹೊಂದಿದ್ದು ಪತ್ರಿಕೆಯು ನಮ್ಮ ಸಮಾಜ ಬಾಂಧವರೆಲ್ಲರ ಮನೆಗೆ ತಲುಪಬೇಕು ಎಂಬುದು ನಮ್ಮ ಮೂಲ ಉದ್ದೇಶ. ಪ್ರಧಾನ ಸಂಪಾದಕರು ಮತ್ತು ಸಂಪಾದಕ ಮಂಡಳಿಯಿದ್ದು ವರ್ಷದಿಂದ ವರ್ಷಕ್ಕೆ ಉನ್ನತಿಯನ್ನು ಪಡೆಯುತ್ತಿದೆ.