No products in the cart.

Contacts

92 Bowery St., NY 10013

thepascal@mail.com

+1 800 123 456 789

ಈ ಕಾರ್ಯಕ್ರಮದಲ್ಲಿ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.

ದಿನಾಂಕ:- 22-01-2024 ರಂದು ಛತ್ರಿಕೇರಿ ಸಂಘಟನಾ ಸಮಿತಿಯಿಂದ ಅಯೋಧ್ಯೆಯ ರಾಮದೇವರ ಪ್ರತಿಷ್ಠಾಪನ ಅಂಗವಾಗಿ ರಥಬೀದಿಯ ರಾಮಚಂದ್ರಪುರ ಮಠದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ರಾಮ ತಾರಕ ಜಪ ಮತ್ತು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವಿಶೇಷ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ದಿನಾಂಕ:-  14-01-2024 ರಂದು ಬಾಳೆಬೈಲು ಸಂಘಟನಾ ಸಮಿತಿಯವರಿಂದ ಕುರುವಳ್ಳಿಯ ಅಂಬೇಡ್ಕರ್ ವಸತಿ ಶಾಲೆಯಲ್ಲಿ 10ನೇ ತರಗತಿಯ ಮಕ್ಕಳಿಗೆ ಪರೀಕ್ಷಾ ಸಿದ್ಧತೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪರೀಕ್ಷಾ ಭಯ ನಿವಾರಣೆ, ಓದುವ ತಂತ್ರ ಹಾಗೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಯಿತು.

ದಿನಾಂಕ:-  12-01-2024 ರಂದು ತೀರ್ಥಹಳ್ಳಿ ಪುರಾಣ ಪ್ರಸಿದ್ಧ ರಾಮೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ರಥಬೀದಿ ಘಟಕ ಸಂಘಟನಾ ಸಮಿತಿಯವರು ಜಾತ್ರಾರ್ತಿಗಳಿಗೆ ಉಚಿತವಾಗಿ ಹತ್ತಾರು ಗಿಡಮೂಲಿಕೆಗಳಿಂದ ತಯಾರಿಸಿದ ಪಾನಕವನ್ನು ವಿತರಿಸಿದರು. ಅಧಿಕ ಭಕ್ತಾದಿಗಳು ಪಾನಕ ಸೇವಿಸಿ ಸಂತಸ ವ್ಯಕ್ತಪಡಿಸಿದರು.

ದಿನಾಂಕ:-  10-01-2024 ರಂದು ಬಾಳೆಬೈಲು ಸಂಘಟನಾ ಸಮಿತಿಯವರು ಹೆಣ್ಣು ಮಕ್ಕಳಿಗೆ ಹದಿಹರೆಯದಲ್ಲಾಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಅರಿವು ಕಾರ್ಯಗಾರವನ್ನು ಏರ್ಪಡಿಸಿದ್ದರು.

ದಿನಾಂಕ:-  02-12-2023 ರಂದು ಗಾಯತ್ರಿ ಮಂದಿರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಹಾಗೂ ಲಕ್ಷ್ಮೀನಾರಾಯಣ ದೇವಸ್ಥಾನದ ದೀಪೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ , ಮಕ್ಕಳಿಂದ ಕನ್ನಡ ಗೀತೆಗಳ ಸಾಮೂಹಿಕ ಗಾಯನ. ರಂಗೋಲಿ ಸ್ಪರ್ಧೆ. ಹಾಗೂ ಕರ್ನಾಟಕ ಸುವರ್ಣ ಸಂಭ್ರಮದ ವಿಷಯವಾಗಿ ಪ್ರೊಫೆಸರ್ ಡಿ.ಎಸ್.ಸೋಮಶೇಖರ್ ರವರಿಂದ ಉಪನ್ಯಾಸ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿತು.

ದಿನಾಂಕ:-  29-10-2023 ರಂದು ಬ್ರಾಹ್ಮಣ ಸಂಘ ಹಾಗೂ ವಿಪ್ರ ಯುವ ವೇದಿಕೆಯ ವತಿಯಿಂದ ಮಕ್ಕಳಿಗಾಗಿ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಮಕ್ಕಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ದಿನಾಂಕ:-  20-10-2023 ರಂದು ಕುರುವಳ್ಳಿ ಸಂಘಟನಾ ಸಮಿತಿಯಿಂದ ಗಾಯತ್ರಿ ಮಂದಿರದಲ್ಲಿ 20ನೇ ವರ್ಷದ ಸರಸ್ವತಿ ಪೂಜೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ದಿನಾಂಕ:-  10-10-2023 ರಂದು ಬಾಳೆಬೈಲು ಸಂಘಟನಾ ಸಮಿತಿಯವರು ಮಹಿಳೆಯರಿಗೆ ಋತುಬಂಧದ ಸಮಸ್ಯೆಯ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೊತೆಗೆ ಮನೆಯಲ್ಲಿಯೇ ತಯಾರಿಸಬಹುದಾದ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಲಾಯಿತು.

ದಿನಾಂಕ:- 10-09-2023 ರಂದು ಕುಶಾವತಿ ಸಂಘಟನಾ ಸಮಿತಿಯವರು ಹಮ್ಮಿಕೊಂಡಿದ್ದ ರುಕ್ ಸಂಹಿತಾ ವೇದಪಾರಾಯಣ ಯಶಸ್ವಿಯಾಗಿ ಸಂಪನ್ನಗೊಂಡಿತು.

ದಿನಾಂಕ:- 20-8-2023 ರಂದು ಗಾಯತ್ರಿ ಮಂದಿರದಲ್ಲಿ ಬೆಳಿಗ್ಗೆ 11:00 ಗಂಟೆಗೆ ಬ್ರಾಹ್ಮಣರ ಸಂಘ, ತೀರ್ಥಹಳ್ಳಿ, ಇದರ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸರ್ವ ಸದಸ್ಯರ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ತುಂಬರಮನೆ ಚಂದ್ರಶೇಖರ್ ರವರು ವಹಿಸಿದ್ದರು.
ಸರ್ವ ಸದಸ್ಯರ ಸಭೆಯ ಮೊದಲು ವಿವಿಧ ಪರೀಕ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ,ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ತುಂಬರಮನೆ ಚಂದ್ರಶೇಖರ್ ರವರು ವಹಿಸಿದ್ದರು. ಸಂಘದ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಿತಿಯ ಸಂಚಾಲಕರಾದ ಶ್ರೀ.ಜಿ.ಎಸ್.ನಾರಾಯಣ ರಾವ್,ಸಂಘದ ಕಾರ್ಯದರ್ಶಿಯವರಾದ ಸತೀಶ್ ರವರು ಮತ್ತು ಸಂಘದ ಕೋಶಾಧಿಕಾರಿ ಡಾ.ಮನೋಹರ್ ರಾವ್ ರವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅದೇ ದಿನ ಬ್ರಾಹ್ಮಣ ಸಂಘದ ಪಟ್ಟಣ ಸಮಿತಿಯ ಬಾಳೆಬಯಲು ಸಂಘಟನಾ ಸಮಿತಿಯ ವತಿಯಿಂದ ಗೆಜ್ಜೆ ವಸ್ತ್ರ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರ ಪ್ರತಿಭೆ ಹೋರ ತರಲು ಇಂಥದೊಂದು ಉತ್ತಮ ವೇದಿಕೆಯನ್ನು ಒದಗಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು . ಒಂದು ಸಾವಿರಕ್ಕೂ ಹೆಚ್ಚು ಗೆಜ್ಜೆ ವಸ್ತ್ರಗಳು ಈ ಸಂದರ್ಭದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸೆಳೆಯಿತು.

ತಾರೀಕು 10-9-2023 ರಂದು ಬ್ರಾಹ್ಮಣ ಸಂಘ ತೀರ್ಥಹಳ್ಳಿಯ ಯುವ ವೇದಿಕೆ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಭಜನಾ ಸ್ಪರ್ಧೆಯಲ್ಲಿ ತಾಲೂಕಿನಾದ್ಯಂತದಿಂದ ಬಂದ ಭಜನಾ ಮಂಡಳಿಗಳು ಪಾಲ್ಗೊಂಡುಭಜನಾ ಸ್ಪರ್ಧೆಯನ್ನು ಚಂದಗೊಳಿಸಿದರು.ಸಂಘಟನೆ ಬಲಗೊಳ್ಳುವ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿತು.

ದಿನಾಂಕ:- 25.04.2023 ರಂದು ನಡೆದ ಶ್ರೀಶಂಕರಜಯಂತಿಯ ಅಂಗವಾಗಿ ಗಣಹೋಮ, ಗಾಯತ್ರಿ ಹೋಮ ಮತ್ತು ಪವಮಾನ ಹೋಮ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇ|| ಬ್ರ|| ಶ್ರೀ|| ವಾಸುದೇವ ರಂಗಾಭಟ್ಟರು, ಉಡುಪಿ ಇವರು ಶ್ರೀ ಶಂಕರಾಚಾರ್ಯರ ಜೀವನ ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.

ಶ್ರೀ ಕುಂಟುವಳ್ಳಿ ದತ್ತಾತ್ರಿ – “ಸಹಸ್ರ ಚಂಡಿಕಾಯಾಗ”ವನ್ನು ತಮ್ಮ ಸ್ವಗೃಹದಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿ ಸಂಪನ್ನಗೊಳಿಸಿದ ಶ್ರೀಯುತರನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.

ಧಾರ್ಮಿಕ ಕ್ಷೇತ್ರ: (ಪೌರೋಹಿತ್ಯ) ಶ್ರೀಯುತ ಎಸ್. ವಿ. ಲಕ್ಷ್ಮಿನಾರಾಯಣ ಭಟ್ಟರು, ಕೆರೆಮನೆ

ಧಾರ್ಮಿಕ ಕ್ಷೇತ: (ಅರ್ಚಕ) ಶ್ರೀಯುತ ಬಿ. ಕೆ. ಶ್ರೀನಾಥ, ಹೊರಣಿ.

ಕೃಷಿ ಕ್ಷೇತ್ರ: ಶ್ರೀಯುತ ಡಿ. ಜಿ. ಹರೀಶ್, ದಾಸನಕೊಡಿಗೆ.

ಪಾಕಶಾಸ್ತ್ರ ಕ್ಷೇತ್ರ: ಶ್ರೀಮತಿ ಜಾನಕಿ. ಟಿ. ಎಸ್, ತೀರ್ಥಮುತ್ತೂರು.

ಸೇವಾ ಕ್ಷೇತ್ರ: ಶ್ರೀಯುತ ಯು. ವಿ. ಕುಮಾರಸ್ವಾಮಿ, ಬೆಜ್ಜವಳ್ಳಿ.

ಸಮಾಜಸೇವಾ ಕ್ಷೇತ್ರ: ಶ್ರೀಯುತ ಎಮ್. ಹೆಚ್. ಸದಾಶಿವ, ಮಂಕರಗೋಡು.

ಪಾಕಶಾಸ್ತ್ರ ಕ್ಷೇತ್ರ: ಶ್ರೀಮತಿ ಜಾನಕಿ. ಟಿ. ಎಸ್, ತೀರ್ಥಮುತ್ತೂರು.

ಸೇವಾ ಕ್ಷೇತ್ರ: ಶ್ರೀಯುತ ಯು. ವಿ. ಕುಮಾರಸ್ವಾಮಿ, ಬೆಜ್ಜವಳ್ಳಿ.

ಶ್ರಮಿಕ ಕ್ಷೇತ್ರ: ಶ್ರೀಯುತ ಸೀತಾರಾಮ ರಾವ್, ಜಾಗಟಗಾರು.

ಕ್ರೀಡಾ ಕ್ಷೇತ್ರ: ಶ್ರೀಯುತ ಕೆ. ಎಸ್. ಗೋಪಾಲರಾವ್, ಕಾರಗಲ್ಲು

ದಿನಾಂಕ:- 04-09-2022 ರ ಭಾನುವಾರದಂದು ಗಾಯತ್ರಿ ಮಂದಿರದಲ್ಲಿ ವಿವಿಧ ಪರೀಕ್ಷೆಗಳಲ್ಲಿ ತಾಲೂಕಿಗೆ ಅತಿಹೆಚ್ಚಿನ ಅಂಕಪಡೆದವರು ಮತ್ತು ವಿಶ್ವವಿದ್ಯಾನಿಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ತಾಲೂಕಿನ ವಿದ್ಯಾರ್ಥಿಗಳು, ಜಿಲ್ಲಾ ಹಾಗು ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ, ರಾಜ್ಯಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು.

1. ಹರ್ಷಿತ. ಎಸ್. ಹೆಚ್ – ಎಸ್. ಎಸ್. ಎಲ್. ಸಿ. ಯಲ್ಲಿ ಹೆಚ್ಚು ಅಂಕ, ಸಂಸ್ಕೃತದಲ್ಲಿ ಹೆಚ್ಚು ಅಂಕ.
2. ಸಮರ್ಥ. ಹೆಚ್. ಎ – ಎಸ್. ಎಸ್. ಎಲ್. ಸಿ. ಯಲ್ಲಿ ಕನ್ನಡದಲ್ಲಿ ಹೆಚ್ಚಿನ ಅಂಕ.
3. ದಿಶಾ ಜೋಯ್ಸ್ – ಎಸ್. ಎಸ್. ಎಲ್. ಸಿ. ಯಲ್ಲಿ  ಹೆಚ್ಚಿನ ಅಂಕ, ಸಂಸ್ಕೃತದಲ್ಲಿ ಹೆಚ್ಚಿನ ಅಂಕ.
4. ಸಂಜನಾ. ಎನ್. ಎಸ್ – ಎಸ್. ಎಸ್. ಎಲ್. ಸಿ. ಯಲ್ಲಿ ಕನ್ನಡದಲ್ಲಿ ಹೆಚ್ಚಿನ ಅಂಕ.
5. ಮೇಧಾ ರಾವ್. ಕೆ. ಎನ್. – ಎಸ್. ಎಸ್. ಎಲ್. ಸಿ. ಯಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ಅಂಕ.
6. ಪೂರ್ವಿ. ಎನ್. ಆಚಾರ್ಯ – ಎಸ್. ಎಸ್. ಎಲ್. ಸಿ ಸಂಸ್ಕೃತದಲ್ಲಿ ಹೆಚ್ಚಿನ ಅಂಕ.
7. ಸಿಂಚನ. ಕೆ. ಎಸ್ – ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ.
8. ಅನಘಾ. ಎಂ. ಎಸ್ – ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ.
9. ರಮಶ್ರೀ. ಸಿ. ಆರ್. ಕೆರೆಮನೆ – ಬಿ. ಎಸ್‍ಸಿ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ .
10. ಸ್ವಾತಿ. ವಿ. ಎಸ್. ವಡ್ಡಿನಬೈಲು – ಎಂ. ಎಸ್‍ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪ್ರಥಮ ರ‍್ಯಾಂಕ್ .
11. ಗಾಯತ್ರಿ. ಕೆ. ಎಂ. ಆರಗ – ಎಂ. ಕಾಂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ .

ದಿನಾಂಕ:- 20-08-2023 ರ ಭಾನುವಾರದಂದು ಗಾಯತ್ರಿ ಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪುರಸ್ಕೃತರು.
1. ಅಮಿತ್ ಶಾಸ್ತ್ರಿ, ಆರಗ – ಹತ್ತನೆ ತರಗತಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್, ಸಂಸ್ಕøತ – 125 ಕ್ಕೆ 125, ಚೆಸ್ ಪಂದ್ಯಾವಳಿ – ರಾಜ್ಯಮಟ್ಟದಲ್ಲಿ 6 ನೇ ಸ್ಥಾನ, ಬ್ಯಾಡ್ಮಿಂಟನ್ – ಜಿಲ್ಲಾಮಟ್ಟ, ದ್ವಿತೀಯ ಸ್ಥಾನ.
2. ಅನ್ವಿತಾ ಭಟ್, ತೀರ್ಥಹಳ್ಳಿ – ಹತ್ತನೆ ತರಗತಿಯಲ್ಲಿ ರಾಜ್ಯಕ್ಕೆ ಐದನೆ ರ‍್ಯಾಂಕ್, ಸಂಸ್ಕೃತ 125 ಕ್ಕೆ 125, ಭಾರತೀ ಸಂಸ್ಕೃತಿ ಪ್ರತಿಷ್ಠಾನದಿಂದ ನಡೆಸುವ ಮಹಾಭಾರತ ಪರೀಕ್ಷೆ – ಚಿನ್ನದ ಪದಕ.
3. ಅದಿತಿ. ಟಿ. ಎಸ್, ತುಪ್ಪದಮನೆ, ಹತ್ತನೆ ತರಗತಿ – ಸಂಸ್ಕøತದಲ್ಲಿ 125 ಕ್ಕೆ 125.
4. ಚಿರಾಗ್ ಪಟವರ್ಧನ್, ಕೊಳವಳ್ಳಿ – ಹತ್ತನೆ ತರಗತಿ – ಸಂಸ್ಕೃತದಲ್ಲಿ 125 ಕ್ಕೆ 125.
5. ಸಿಂಚನಾ ಪುರಾಣಿಕ್, ತೀರ್ಥಹಳ್ಳಿ – ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ.
6. ಅನರ್ಘ್ಯ ಭಟ್. ಎಂ. ಎಲ್, ತೀರ್ಥಹಳ್ಳಿ – ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ.
7. ಸುಷ್ಮಾ. ಟಿ. ವೈ, ತೀರ್ಥಹಳ್ಳಿ – ಗಣಕ ವಿಜ್ಞಾನ ಸ್ನಾತಕೋತ್ತರ ವಿಭಾಗದಲ್ಲಿ 3 ನೇ ರ‍್ಯಾಂಕ್.

 

ದಿನಾಂಕ:- 20.08.2023 ರ ಭಾನುವಾರದಂದು ಗಾಯತ್ರಿ ಮಂದಿರದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ 2023 ರ ಮೇ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾರಣೀಕರ್ತರಲ್ಲಿ ಒಬ್ಬರಾದ ನಮ್ಮ ಸಮಾಜದ ಪ್ರಮುಖರಾದ ವೇ|| ಬ್ರ|| ಶ್ರೀ|| ಲಕ್ಷ್ಮೀಶ ತಂತ್ರಿಗಳು ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ದಿನಾಂಕ:- 02.10.2022 ರ ಭಾನುವಾರದಂದು ಸಂಘಟನಾ ಸಮಿತಿ, ಕುರುವಳ್ಳಿ ಇವರು ಸರಸ್ವತಿಪೂಜೆಯನ್ನು ಗಾಯತ್ತಿ ಮಂದಿರದಲ್ಲಿ ಹಮ್ಮಿಕೊಂಡಿದ್ದರು.

ದಿನಾಂಕ:- 26.11.2022 ರ ಶನಿವಾರದಂದು ಪಟ್ಟಣ ಸಮಿತಿಗಳ ಒಕ್ಕೂಟದಿಂದ ಗಾಯತ್ರಿ ಮಂದಿರದಲ್ಲಿ “ಸಾಂಸ್ಕೃತಿಕ  ಕಾರ್ಯಕ್ರಮ” ಮತ್ತು ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ “ಕಾರ್ತಿಕ ದೀಪೋತ್ಸವ” ನಡೆಸಲಾಯಿತು.

ದಿನಾಂಕ:- 30.03.2023 ರ ಗುರುವಾರದಂದು ಸಂಘಟನಾ ಸಮಿತಿ ಸೊಪ್ಪುಗುಡ್ಡೆ ಇವರು “ಶ್ರೀರಾಮನವಮಿ” ಆಚರಣೆಯನ್ನು ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದರು.

ದಿನಾಂಕ:-25.04.2023 ರ ಮಂಗಳವಾರದಂದು ಗಾಯತ್ರಿ ಮಂದಿರದಲ್ಲಿ “ಶ್ರೀ ಶಂಕರ ಜಯಂತಿ” ಯನ್ನು ಆಚರಿಸಲಾಯಿತು. ಗಣಹೋಮ, ಗಾಯತ್ರಿಹೋಮ ಮತ್ತು ಪವಮಾನ ಹೋಮಗಳನ್ನು ನಡೆಸಲಾಯಿತು. 21.07.2023 ರ ಶುಕ್ರವಾರದಂದು ಋಕ್ ಸಂಹಿತಾ ಪಾರಾಯಣ ಮತ್ತು ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ:-20.08.2023 ರ ಭಾನುವಾರದಂದು ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ತುಂಬರಮನೆ ಚಂದ್ರಶೇಖರ ರವರು ಅಧ್ಯಕ್ಷತೆ ವಹಿಸಿದ್ದು, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಿ. ಎಸ್. ನಾರಾಯಣರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರದಲ್ಲಿ 2022-23ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ನಡೆಸಲಾಯಿತು.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಘಟನಾ ಸಮಿತಿಗಳನ್ನು ಅಭಿನಂದಿಸಲಾಯಿತು.
ಅಂದು ಮಧ್ಯಾಹ್ನ ಸಂಘಟನಾ ಸಮಿತಿ, ಬಾಳೆಬೈಲು ಇವರು “ಗೆಜ್ಜೆವಸ್ತ್ರ ಪ್ರದರ್ಶನ ಮತ್ತು ಮಾರಾಟ”ವನ್ನು ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದರು. ತಾಲೂಕಿನ ವಿವಿಧ ಭಾಗಗಳಿಂದ 25ಕ್ಕೂ ಹೆಚ್ಚು ಮಹಿಳೆಯರು 800ಕ್ಕೂ ಹೆಚ್ಚು ವಿವಿಧ ವಿನ್ಯಾಸದ ಗೆಜ್ಜೆವಸ್ತ್ರಗಳನ್ನು ಪ್ರದರ್ಶಿಸಿದರು.

ದಿನಾಂಕ:- 01.10.2023 ರ ಭಾನುವಾರ ಬಾಳೆಬೈಲು ಸಂಘಟನಾ ಸಮಿತಿಯವರು ಮಹಿಳೆಯರಿಗೆ “ಋತುಬಂಧದ ಸಮಸ್ಯೆಗಳು” ಹಾಗೂ “ಪೌಷ್ಠಿಕ ಆಹಾರದ ಮಹತ್ವ”ದ ಕುರಿತು ಅಂಗನವಾಡಿ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ದಿನಾಂಕ:- 20.10.2023 ರ ಶುಕ್ರವಾರದಂದು ಕುರುವಳ್ಳಿ ಸಂಘಟನಾ ಸಮಿತಿಯಿಂದ “ಶ್ರೀ ಸರಸ್ವತಿ ಪೂಜೆ”ಯನ್ನು ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ:- 17.09.2022 ರ ಶನಿವಾರದಂದು ಕುಶಾವತಿ ಸಂಘಟನಾ ಸಮಿತಿಯವರು “ಶ್ರೀ ಶಂಕರ ತತ್ವ ಪ್ರಸಾರ” ಅಭಿಯಾನದ ಜಿಲ್ಲಾ ಪ್ರಶಿಕ್ಷಣವನ್ನು ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ:- 08.09.2022 ರಂದು ಗಾಯತ್ರಿ ಮಂದಿರದಲ್ಲಿ ತ್ರಿಮತಸ್ಥ ವಿಪ್ರರಿಗೆ “ಉಪಾಕರ್ಮ”ವನ್ನು ಹಮ್ಮಿಕೊಳ್ಳಲಾಗಿತ್ತು.

ದಿನಾಂಕ:- 24.12.2022 ರಂದು ರಥಬೀದಿಯ ಸಂಘಟನಾ ಸಮಿತಿಯವರು ಶ್ರೀ ರಾಮೇಶ್ವರ ದೇವರ ರಥೋತ್ಸವದಲ್ಲಿ ಭಕ್ತಾದಿಗಳಿಗೆ ಉಚಿತ ಪಾನಕ ವಿತರಿಸಿದರು.

ದಿನಾಂಕ:- 15.01.2023 ರ ಭಾನುವಾರದಂದು ಬೆಟ್ಟಮಕ್ಕಿ ಸಂಘಟನಾ ಸಮಿತಿಯವರಿಂದ “ಸಂಕ್ರಾಂತಿ”ಹಬ್ಬದ ಆಚರಣೆ ನಡೆಯಿತು.

ದಿನಾಂಕ:- 12.02.2023 ರಂದು ಬೆಟ್ಟಮಕ್ಕಿ ಸಂಘಟನಾ ಸಮಿತಿಯವರು ಬಸವಾನಿಯ ಅಬಲಾಶ್ರಮಕ್ಕೆ ಭೇಟಿನೀಡಿ ಹಿರಿಯರೊಂದಿಗೆ ಭೋಜನ ಸವಿದು ಆಶ್ರಮಕ್ಕೆ ನೆರವು ನೀಡಿದರು.

ದಿನಾಂಕ:- 18.02.2023 ರ ಶನಿವಾರದಂದು ಪಟ್ಟಣ ಸಮಿತಿಗಳ ಒಕ್ಕೂಟದಿಂದ ಕುರುವಳ್ಳಿಯ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ “ಶಿವರಾತ್ರಿ” ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.

ದಿನಾಂಕ:- 19.03.2023 ರ ಭಾನುವಾರದಂದು ಬಾಳೆಬೈಲು ಸಂಘಟನಾ ಸಮಿತಿಯಿಂದ “ಮಹಿಳಾ ದಿನಾಚರಣೆ” ಆಚರಿಸಲಾಯಿತು. “ಪಿ ಸಿ ಓ ಡಿ” ಸಮಸ್ಯೆ ಕುರಿತು ವೈದ್ಯರಿಂದ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.

ದಿನಾಂಕ:- 22.03.2023 ರಿಂದ 30.03.2023 ರ ವರೆಗೆ ರಥಬೀದಿ ಸಂಘಟನಾ ಸಮಿತಿಯವರು ರಥಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮೇಲ್ಭಾಗದಲ್ಲಿ ಪ್ರತಿದಿನವೂ “ಭಜನಾ ಕಾರ್ಯಕ್ರಮ” ಹಮ್ಮಿಕೊಂಡಿದ್ದರು. ಪಟ್ಟಣ ವ್ಯಾಪ್ತಿಯ ಸಂಘಟನಾ ಸಮಿತಿಯವರು ಒಂದೊಂದು ದಿನ ಭಜನಾ ಸೇವೆಯನ್ನು ನಡೆಸಿಕೊಟ್ಟರು.

ದಿನಾಂಕ:- 30.03.2023 ರಂದು ಬಾಳೆಬೈಲು ಸಂಘಟನಾ ಸಮಿತಿಯಿಂದ ಶ್ರೀ ವೆಂಕಟರಮಣ ದೇವಸ್ಥಾನ ಬಾಳೆಬೈಲು ಇಲ್ಲಿ “ಶ್ರೀ ರಾಮನವಮಿ ಆಚರಣೆ” ಮಾಡಲಾಯಿತು.

ದಿನಾಂಕ:- 01.04.2023 ರಿಂದ 07.04.2023 ರ ವರೆಗೆ ಬಾಳೆಬೈಲು ಸಂಘಟನಾ ಸಮಿತಿಯಿಂದ 1 ರಿಂದ 7 ನೇ ತರಗತಿ ಮಕ್ಕಳಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಬಾಳೆಬೈಲು ಇಲ್ಲಿ “ಬೇಸಿಗೆ ಶಿಬಿರ”ವನ್ನು ಹಮ್ಮಿಕೊಂಡಿದ್ದರು.

ದಿನಾಂಕ:- 17.04.2023 ರ ಭಾನುವಾರದಂದು ಕುಶಾವತಿ ಸಂಘಟನಾ ಸಮಿತಿಯವರು ಗಾಯತ್ರಿ ಮಂದಿರದಲ್ಲಿ “ಶ್ರೀ ಸತ್ಯನಾರಾಯಣ ವ್ರತ” ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ದಿನಾಂಕ:- 25.04.2023 ರಂದು ನಡೆದ ಶ್ರೀಶಂಕರಜಯಂತಿಯ ಅಂಗವಾಗಿ ಗಣಹೋಮ, ಗಾಯತ್ರಿ ಹೋಮ ಮತ್ತು ಪವಮಾನ ಹೋಮ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇ|| ಬ್ರ|| ಶ್ರೀ|| ವಾಸುದೇವ ರಂಗಾಭಟ್ಟರು, ಉಡುಪಿ ಇವರು ಶ್ರೀ ಶಂಕರಾಚಾರ್ಯರ ಜೀವನ ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.

ದಿನಾಂಕ:-04-09-2022 ರಂದು ಗಾಯತ್ರೀ ಮಂದಿರದಲ್ಲಿ ವಿವಿಧ ಪರೀಕ್ಷೆಗಳಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ತುಂಬರಮನೆ ಚಂದ್ರಶೇಖರ್ ವಹಿಸಿದ್ದು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಿ.ಎಸ್. ನಾರಾಯಣರಾವ್ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮದ್ಯಾಹ್ನ 2021-22 ನೆ ಸಾಲಿನ ಸರ್ವ ಸದಸ್ಯರ ಸಭೆ ನಡೆಯಿತು. ಸಭೆಯ ಅದ್ಯಕ್ಷತೆಯನ್ನು ಶ್ರೀ ತುಂಬರಮನೆ ಚಂದ್ರಶೇಖರ್ವವರು ವಹಿಸಿದ್ದು. ಸದರಿ ವರದಿ ಸಾಲಿನಲ್ಲಿ ಸಂಘವು ಕೈಗೊಂಡ ವಿವಿದ ಕಾರ್ಯಕ್ರಮಗಳು ಮುಂದೆ ಕೈಗೊಳ್ಳುವ ಕಾರ್ಯಕ್ರಮದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು

ದಿನಾಂಕ-28-08-2022 ರಂದು ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಕರ್ನಾಟಕ ಸರ್ಕಾರ ಮಾನ್ಯ ಗೃಹ ಸಚಿವರು ಮತ್ತು ತೀರ್ಥಹಳ್ಳಿ ಕ್ಷೇತ್ರದ ಶಾಸಕರೂ ಆದ ಶ್ರೀ ಆರಗ ಜ್ಞಾನೇಂದ್ರ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರು ಆದ ಶ್ರೀ ಅಶೋಕ ಹಾರನಹಳ್ಳಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷರು ಆದ ಶ್ರೀ ಕೆ.ಸಿ. ನಟರಾಜ ಭಾಗವತ್ ಮತ್ತು ಶ್ರೀ ಎ.ಆರ್. ಪ್ರಸನ್ನ ಕುಮಾರ್ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘ ನಿ. ಬೆಂಗಳೂರು ಇವರನ್ನು ಅಭಿನಂದಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ತುಂಬರಮನೆ ಚಂದ್ರಶೇಖರ್ ವಹಿಸಿದ್ದು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಿ.ಎಸ್. ನಾರಾಯಣರಾವ್ ಇವರು ಅಭಿನಂದನಾ ಭಾಷಣ ಮಾಡಿದರು.

ದಿನಾಂಕ:- 29-07-2022 ರಂದು ಲಲಿತಾ ಸಹಸ್ರ ನಾಮ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಗಾಯತ್ರೀ ಮಂದಿರದಲ್ಲಿ ನಡೆಸಲಾಯಿತು.

ದಿನಾಂಕ:- 21-06-2022 ರಂದು ಸಂಘಟನಾ ಸಮಿತಿ ರಥಬೀದಿಯವರು ಜೆ.ಸಿ.ಐ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಿದರು ಡಾ|| ನಮಿತಾ ಉಡುಪ ತೀರ್ಥಹಳ್ಳಿ ಜಿ.ಸಿ. ಐ. ನ ಅಧ್ಯಕ್ಷರಾದ ಶ್ರೀಮತಿ ವಿನುತ ಮುರಳೀಧರ್ ಮತ್ತು ಸಂಘದ ನಿರ್ದೇಶಕರಾದ ಶ್ರೀ ರಾಘವೇಂದ್ರ ಆಚಾರ್ಯ ರವರು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.

ದಿನಾಂಕ:- 06-05-2022 ರಂದು ಗಾಯತ್ರೀ ಮಂದಿರದಲ್ಲಿ ಗಾಯತ್ರೀ ಹೋಮ, ಗಣಹೋಮ, ಬ್ರಹ್ಮೋಪದೇಶ, ಧಾರ್ಮಿಕ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ವಾನ್ ಕೆ.ಎಸ್. ಶ್ರೀಕಂಠ ಭಟ್ಟರು ಕಮ್ಮರಡಿ ಇವರು” ಬ್ರಹ್ಮೋಪದೇಶದ ಮಹತ್ವ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ವಿಪ್ರರ ನಡೆ” ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.

ದಿನಾಂಕ:- 11-04-2022 ರಂದು ಸಂಘಟನಾ ಸಮಿತಿ ಬಾಳೇಬೈಲು ಇವರು ಕಮ್ಮರಡಿಯ ವಿಶ್ವ ತೀರ್ಥ ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಉನ್ನತ ಶಿಕ್ಷಣ, ವಿದ್ಯಾರ್ಥಿವೇತನದ ಬಗ್ಗೆ ಶ್ರೀ ನರಸಿಂಹ ಭಟ್ ವೃತ್ತಿ ಉಪನ್ಯಾಸವನ್ನು ನೀಡಿದರು ವಿದ್ಯಾರ್ಥಿಗಳು ಭಾಗವಹಿಸಿದ್ದರು

ಸಂಘಟನಾ ಸಮಿತಿ ಬಾಳೇಬೈಲು ಇವರು ದಿನಾಂಕ:- 10-04-2022 ರಂದು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಆಚರನೆ ಮಾಡಿದರು.

ದಿನಾಂಕ: 10-04-2022 ರಂದು ಪಟ್ಟಣ ಸಮಿತಿ ಒಕ್ಕೂಟ, ಸಂಘಟನಾ ಸಮಿತಿ ಸೊಪ್ಪುಗುಡ್ಡೆ ಇವರ ಆಶ್ರಯದಲ್ಲಿ ಶ್ರೀ ಗಾಯತ್ರೀ ಮಂದಿರದಲ್ಲಿ ರಾಮನವಮಿ ಭಜನಾ ಕಾರ್ಯಕ್ರಮವನ್ನು ಸೊಪ್ಪುಗುಡ್ಡೆ, ಬದನೇಹಿತ್ತಲು , ಕುಶಾವತಿ ಮತ್ತು ಕೆ.ಸಿ. ರಸ್ತೆಯ ಭಜನಾ ತಂಡದವರು ನಡೆಸಿಕೊಟ್ಟರು. ಸುಮಾರು ಎರಡು ಗಂಟೆಗಳ ಕಾಲ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸೊಪ್ಪುಗುಡ್ಡೆ ಸಂಘಟನಾ ಸಮಿತಿಯ ತಾಲ್ಲೂಕು ಪ್ರತಿನಿಧಿಗಳಾದ ಶ್ರೀ ಬಿ. ವೆಂಕಟರಮಣ ಇವರು ಎಲ್ಲಾ ಭಜನಾ ತಂಡದವರಿಗೆ ನಗದು ಪುರಸ್ಕಾರ ನೀಡಿದರು.

ದಿನಾಂಕ:- 03-04-2022 ರಿಂದ 10-04-2022 ರವರೆಗೆ ಪಟ್ಟಣ ಸಮಿತಿ ಒಕ್ಕೂಟ ದಿಂದ ರಾಮೋತ್ಸವದ ಅಂಗವಾಗಿ ಒಂದೊಂದು ದಿನ ಒಂದೊಂದು ಸಮಿತಿಯವರು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲಿ ಭಜನೆಯನ್ನು ನೆರವೇರಿಸಿಕೊಟ್ಟಿದ್ದಾರೆ.

ದಿನಾಂಕ:- 02-04-2022 ರಂದು ಸಂಘಟನಾ ಸಮಿತಿ ರಥಬೀದಿ ಇವರ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪಂಚಾಗ ಶ್ರವಣ ಕಾರ್ಯಕ್ರಮವನ್ನು ನಡೆಸಿದರು.

ದಿನಾಂಕ:- 28-03-2022 ರಂದು ಸಂಘಟನಾ ಸಮಿತಿ ಗುಡ್ಡೇಕೊಪ್ಪ ಇವರು ಕೋಲಹಳ್ಳಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಅಭಿಷೇಕ, ಶ್ರೀ ರುದ್ರಾಭಿಷೇಕ ಹಾಗೂ ಶ್ರೀ ದುರ್ಗಾ ಹವನ ಕಾರ್ಯಕ್ರಮ ನಡೆಸಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಸಂಘಟನಾ ಸಮಿತಿಯ ವ್ಯಾಪ್ತಿಯ 81 ಕುಟುಂಬಗಳ ಸಮೀಕ್ಷೆ ನಡೆಸಿದ್ದು ಅದರ ಪುಸ್ತಕವನ್ನು ಸಂಘದ ಅಧ್ಯಕ್ಷರಾದ ಶ್ರೀ ತುಂಬರಮನೆ ಚಂದ್ರಶೇಖರ್ ಇವರಿಗೆ ಹಸ್ತಾಂತರಿಸಿದರು, ಪ್ರತಿಯನ್ನು ಸ್ವೀಕರಿಸಿದ ಅಧ್ಯಕ್ಷರು ಸಂಘಟನಾ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಗುಡ್ಡೇಕೊಪ್ಪ ಸಂಘಟನಾ ಸಮಿತಿ ಸಂಚಾಲಕರಾದ ಶ್ರೀ ಎಂ.ಎನ್. ಮಂಜುನಾಥ, ಕಾರ್ಯದಶರ್ಿ ಶ್ರೀ ಹೆಚ್.ಜಿ. ಸತ್ಯನಾರಾಯಣ, ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾ (ರಿ) ಇದರ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಜಿ.ಎಸ್. ನಾರಾಯಣ ರಾವ್, ಸಮಾಹಿತ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಭಟ್, ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾ. ಇದರ ಕಾರ್ಯದಶರ್ಿಯಾದ ಶ್ರೀ ನರಸಿಂಹ ಭಟ್, ಶ್ರೀ ವಿ. ಸತೀಶ್ ನಿದರ್ೇಶಕರುಗಳಾದ ಶ್ರೀ ಬಿ.ಕೆ. ವಾದಿರಾಜ್, ಶ್ರೀ ಬಿ.ವಿ. ಶ್ರೀಧರ್, ಕೆ. ಶ್ರೀನಿವಾಸ ಮತ್ತು ಗಾಯತ್ರೀ ಮಂದಿರದ ವ್ಯವಸ್ಥಾಪಕರಾದ ಶ್ರೀ ಹೆಚ್.ಎನ್. ಗಣೇಶ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಜಿ.ಎಸ್. ನಿರಂಜನ್ ಮತ್ತು ಶ್ರೀ ಶೃಂಗೇಶ್ವರ ಇವರನ್ನು ಸನ್ಮಾನಿಸಿದರು.

ದಿನಾಂಕ:- 13-03- 2022 ರಂದು ಸಂಘಟನಾ ಸಮಿತಿ ಬಾಳೇಬೈಲು ಇವರು ಮಹಿಳಾ ದಿನ ಆಚರಣೆ ಮಾಡಿದರು ಇದೇ ಸಂದರ್ಭದಲ್ಲಿ ಸಮಿತಿಯ ಮಹಿಳೆಯರಿಗೆ ಸೀರೆಗೆ ಕುಚ್ಚು ಕಟ್ಟುವ ಬಗ್ಗೆ ಮಾಹಿತಿ ನೀಡಿದರು ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ನವ್ಯಶ್ರೀ ಮರಳೀಯವರು ಪ್ರತ್ಯಕ್ಷಿಕೆಯೊಂದಿಗೆ ನಡೆಸಿಕೊಟ್ಟರು. ಪಟ್ಟಣ ಸಮಿತಿ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಜ್ಯೋತಿ ಮೋಹನ್ ರವರನ್ನು ಅಭಿನಂದಿಸಲಾಯಿತು.

ದಿನಾಂಕ:- 06-03-2022 ರಂದು ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾ (ರಿ) ಮತ್ತು ವಿಪ್ರ ಯುವ ವೇದಿಕೆ ಇವರ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಮುಖ್ಯವಾಗಿ ಛದ್ಮವೇಷ, ಭಕ್ತಿಗೀತೆ, ಚಿತ್ರಕಲೆ, ಕಾಗದದಿಂದ ಹೂವು ತಯಾರಿ, ಚಿತ್ರ ಜೋಡಣೆ, ಕಸದಿಂದ ರಸ, ಭಗವದ್ಗೀತೆ, ಸಾಂಪ್ರದಾಯಿಕ ಉಡುಗೆ ಪದಬಂಧ ಮತ್ತು ರಸ ಪ್ರಶ್ನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕೋಶಾಧಿಕಾರಿಗಳಾದ ಡಾ|| ಎನ್.ಎಸ್. ಮನೋಹರ ರಾವ್, ಪ್ರಧಾನ ಕಾರ್ಯದರ್ಶಿಗಳಾದ(ಪ್ರ) ಶ್ರೀ ನರಸಿಂಹ ಭಟ್, ನಿರ್ದೇಶಕರುಗಳಾದ ಶ್ರೀ ಬಿ.ವಿ. ಶ್ರೀಧರ್ ಕೆ.ಶ್ರೀನಿವಾಸ ಮತ್ತು ವಿಪ್ರ ಯುವ ವೇದಿಕೆ ಸಂಚಾಲಕರಾದ ಶ್ರೀ ಬಿ.ವಿ. ಅನುರಾಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಿನಾಂಕ:- 01-03-2022 ರಂದು ಪಟ್ಟಣ ಸಮಿತಿ ಒಕ್ಕೂಟದವರು ಕುರುವಳ್ಳಿಯ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಭಜನಾಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಹಾ ಮಂಗಳಾರತಿಯನಂತರ ಪ್ರಸಾದ ವಿನಿಯೋಗ ನಡೆಯಿತು.

ಸಂಘಟನಾ ಸಮಿತಿ ಬಾಳೇಬೈಲು ಇವರು ದಿನಾಂಕ:- 19-02- 2022 ರಂದು ದೇವಂಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ದತೆ ಮತ್ತು ಮಾನಸಿಕಸ್ಥೈರ್ಯ ವೃದ್ಧಿ ಪಡಿಸುವ ಬಗ್ಗೆ ಉಪನ್ಯಾಸ ಕಾರ್ಯಕ್ರವನ್ನು ನಡೆಸಿದರು ಸಂಪನ್ಮೂಲ ವ್ಯಕ್ತಿಯಾಗಿ ಬಾಳೇಬೈಲು ಸಂಘಟನಾ ಸಮಿತಿಯ ಸದಸ್ಯರು, ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ|| ಮುರಳೀಧರ ಕೀರಣಕೆರೆ ಮತ್ತು ಜೆ.ಸಿ.ಐ ನ ಶ್ರೀಮತಿ ಸ್ವಪ್ನಾ ಶಶಿಧರ ಭಟ್ ಭಾಗವಹಿಸಿದ್ದರು ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಿನಾಂಕ:- 30/01/2022 ರಂದು ವಿಪ್ರ ಯು ವೇದಿಕೆ ಸಹಯೋಗ ದಲ್ಲಿ ಹೊಸಹಳ್ಳಿಯ ಪ್ರಸಾದ್ ಭಾರದ್ವಾಜ್ ಮತ್ತು ಮತ್ತೂರಿನ ವಿ. ಅಚ್ಯುತ ಅವಧಾನೀ ಇವರಿಂದ ಗಮಕವಾಚನ ಕಾರ್ಯಕ್ರಮ ನಡೆಯಿತು. ಅದೇ ದಿನ 2021-24 ರ ಸಾಲಿನ ಕಾರ್ಯಕಾರೀ ಸಮಿತಿಯನ್ನು ರಚನೆ ಮಾಡಲಾಯಿತು

ದಿನಾಂಕ:- 17-12-2021 ರಂದು ಬಾಳೇಬೈಲು ಸಂಘಟನಾ ಸಮಿತಿಯವರು ಮೇಲಿನ ಕುರುವಳ್ಳಿ ಅಂಬೇಡ್ಕರ್ ವಸತಿಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಹದಿಹರೆಯದ ಸವಾಲುಗಳು ಎಂಬ ಕಾರ್ಯಕ್ರಮವನ್ನು ನಡೆಸಿರುತ್ತಾರೆ. ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಇದರ ನಿರ್ದೇಶಕಿಯಾದ ಶ್ರೀಮತಿ ವಿನುತ ಮುರಳೀಧರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ದಿನಾಂಕ:- 14-12-2021 ರಂದು ಬಾಳೇಬೈಲು ಸಂಘಟನಾ ಸಮಿತಿಯವರು ಮಕ್ಕಳ ದಿನಾಚರಣೆ ಆಚರಿಸಿದರು ಸಂಜೆ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಕಾತರ್ಿಕ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿದರು.

ದಿನಾಂಕ;-14-12-2021 ರಂದು ಹೆಗಡೆ ಕೊಪ್ಪ ಸಂಘಟನಾ ಸಮಿತಿಯವರು ಗೀತಾಜಯಂತಿ ಆಚರಣೆಯನ್ನು ಬಹು ವಿಜೃಂಬಣೆಯಿಂದಮಾಡಿದರು

ದಿನಾಂಕ:- 03/12/ 2021 ರಂದು ನಡೆದಜಂಟೀ ಸಭೆಯಲ್ಲಿ 2021-2024 ನೇ ಸಾಲಿನ ಕಾರ್ಯಕಾರೀ ಸಮಿತಿಯನ್ನು ರಚನೆ ಮಾಡಲಾಯಿತು.

ದಿನಾಂಕ:-24/11/2021 ರಂದು ಗಾಯತ್ರೀ ಹೋಮ, ಗಣಹೋಮ, ಮೃತ್ಯುಂಜಯ ಹೋಮ ನಡೆಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ತಾಲ್ಲೂಕಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಡಾ|| ಬಿ.ಎಸ್. ರಾಘವೇಂದ್ರ ಭಟ್ಟರು ನಿರ್ದೇಶಕರು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಬೆಂಗಳೂರು ಇವರು ಸಂಘದ ವೆಬ್-ಸೈಟ್ ಉದ್ಘಾಟಿಸಿದರು. ಮಧ್ಯಾಹ್ನ ಸರ್ವ ಸದಸ್ಯರ ಸಭೆ ನಡೆಯಿತು. ರಾತ್ರಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನಡೆಯಿತು.

ದಿನಾಂಕ:- 02/11/2021 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಶ್ರೀ ಹಾರನಹಳ್ಳಿ ಅಶೋಕ್ ರವರು ಸಂಘಕ್ಕೆ ಬೇಟಿ ನೀಡಿದ್ದು ಸಂಘಟನೆ ಬಗ್ಗೆ ಮಾಹಿತಿ ನೀಡಿರುತ್ತಾರೆ. ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.

ದಿನಾಂಕ:- 21/03/2021 ರಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾಶಿವಮೊಗ್ಗ ಇವರ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆ ನಡೆಯಿತು. ವಾರ್ಷಿಕವಾಗಿ ನಡೆಯುವ ಉಪಾಕರ್ಮ, ಗೌರಿ ಪೂಜೆ ಮತ್ತು ಸರಸ್ವತೀ ಪೂಜೆಯನ್ನು ನಡೆಸಲಾಯಿತು.

ದಿನಾಂಕ:- 12/2/21 ಮತ್ತು 13/2/21 ರಂದು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ದಿನಾಂಕ:-25/01/2020 ಮತ್ತು 26/01/2020 ರಂದು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀಸೂಕ್ತ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಬಾಳಗಾರು ಶ್ರೀಮದಾರ್ಯ ಅಕ್ಷೋಭ್ಯ ತೀರ್ಥ ಸಂಸ್ಥಾನದ ಶ್ರೀ ಶ್ರೀ ಶ್ರೀ ರಘು ಭೂಷಣ ತೀರ್ಥರ ಸಮ್ಮುಖದಲ್ಲಿ ರಜತದ್ವಾರ ಸಮರ್ಪಣೆ ಮತ್ತು ಆಶೀರ್ವಚನ ನಡೆಯಿತು. ಈ ಕಾರ್ಯಕ್ರಮಗಳಿಗೆ ನಮ್ಮ ಸಂಘದ ಸಹಕಾರ ನೀಡಲಾಯಿತು.
ವಿಪ್ರ ಯುವ ವೇದಿಕೆ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಸಾಂಸ್ಕತಿಕ ಮತ್ತು ಶೈಕ್ಷಣಿಕ ಸ್ಪರ್ದೆ ಏರ್ಪಡಿಸಲಾಗಿತ್ತು.

ದಿನಾಂಕ:-16/02/2020 ರಂದು ಮಾನ್ಯ ಶ್ರೀ ಹೆಚ್.ಎಸ್. ಸಚ್ಚಿದಾನಂದ ಮೂರ್ತಿಯವರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ- ಇವರು ಸಂಘಕ್ಕೆ ಬೇಟಿ ನೀಡಿದ್ದು ಈ ಸಂದರ್ಭದಲ್ಲಿ ಸಮಾಜ ಭಾಂದವರ ಸಂಘಟನೆ ಹಾಗೂ ಅಭಿವೃಧ್ಧಿಗೆ ಸಂಬಂಧ ಪಟ್ಟಂತೆ ಸಂಘದಿಂದ ಮನವಿ ಸಲ್ಲಿಸಲಾಯಿತು.ಸಂಘದ ಆಶ್ರಯದಲ್ಲಿನ ಶ್ರೀ ಗಾಯತ್ರೀ ಮಹಿಳಾ ಯಕ್ಷಗಾನ ಮಂಡಳಿ, ಶ್ರೀಮತಿ ಜ್ಯೋತಿ ಶಾಸ್ತ್ರಿಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹಾಗೂ ರಾಜ್ಯದ ಹೊರಗೂ ಹತ್ತಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದೆ.
ವಿಶ್ವದಲ್ಲಿ ತಲ್ಲಣಗೊಳಿಸಿರುವ ಕೋವಿಡ್-19 ರ ನಿರ್ಮೂಲನೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಮ್ಮ ಸಂಘದ ಕಳಕಳಿಯ ಮನವಿಯನ್ನು ಪುರಸ್ಕರಿಸಿ ತಾಲ್ಲೂಕಿನಾದ್ಯಂತ ಋತ್ವಿಜರು ಮೃತುಂಜಯ ಜಪ ಮತ್ತು ತ್ರ್ಯಂಬಕ ಜಪವನ್ನು ತಮ್ಮ ತಮ್ಮ ಮನೆಗಳಲ್ಲಿ ಪಠಿಸಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ ಹಿಂದುಳಿದ ನಮ್ಮ ಸಮಾಜ ಭಾಂದವರಿಗೆ ಒಂದು ಸಾವಿರ ರೂಪಾಯಿಯಂತೆ 128 ಜನರಿಗೆ ಒಟ್ಟು 128000/- ವಿತರಿಸಲಾಯಿತು.ಗಾಯತ್ರೀ ಮಂದಿರಕ್ಕೆ ಸದಾ ಕೆಲಸಕ್ಕೆ ಬರುತ್ತಿದ್ದ 13 ಜನ ಕಾರ್ಮಿಕರಿಗೆ ತಲಾ ರೂಪಾಯಿ 500/- ರಂತೆ 6500/- ರೂಪಾಯಿಗಳನ್ನು ವಿತರಿಸಲಾಯಿತು.ಸಂದಿಗ್ದ ಸಮಯದ ಸಂದರ್ಭಗಳಲ್ಲಿ ಸಮಾಜ ಭಾಂದವರ ಹಿತ ದೃಷ್ಠಿಯಿಂದ ಗಾಯತ್ರೀ ಮಂದಿರದ ಬಾಡಿಗೆಯನ್ನು ಕಡಿಮೆ ಮಾಡಲಾಗಿದೆ.

ದಿನಾಂಕ:- 11/12/2019 ರಂದು ಶ್ರೀ ಮನ್ಮಧ್ವಾಚಾರ್ಯ ಸ್ಥಾಪಿತ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣ ಪೂಜಾ ಪರ್ಯಾಯ ಪೀಠಾರೋಹಣ ಮಾಡಲಿರುವ ಉಡುಪಿಯ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದಂಗಳು ಗಾಯತ್ರೀ ಮಂದಿರಕ್ಕೆ ಆಗಮಿಸಿ ಅನುಗ್ರಹ ಸಂದೇಶ ನೀಡಿದರು,ಪಟ್ಟಣ ಸಮಿತಿ 6ನೇ ಘಟಕದ ಸಹಯೋಗದಲ್ಲಿ ಭಜನಾ ಸ್ಪರ್ದೆ ನಡೆಸಲಾಯಿತು.ಬಾಳೇಬೈಲು ಘಟಕದ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂದು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ದಿನಾಂಕ:-04/08/2019 ರಂದು ಬಾಳೇಬೈಲು ಘಟಕದ ಸಹಯೋಗದೊಂದಿಗೆ ಗೆಜ್ಜೆವಸ್ತ್ರ ಪ್ರದರ್ಶನ ಮತ್ತು ತರಬೇತಿ ಶಿಬಿರ ನಡೆಯಿತು.

ದಿನಾಂಕ:- 16/06/2019 ರಂದು ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀ ಪಾದಂಗಳವರು ಶ್ರೀಮದಚ್ಯುತ ಪ್ರೇಕ್ಷಾಚಾರ್ಯ ಮಹಾ ಸಂಸ್ಥಾನ, ಭೀಮನ ಕಟ್ಟೆ ತೀರ್ಥಹಳ್ಳಿ ಇವರ ದಿವ್ಯ ಸಾನ್ನಿಧ್ಯದಲ್ಲಿ ಶಾನುಭೋಗ ದಾಸಪ್ಪ ದತ್ತಿ ಕುರುವಂಕ ಇವರ 50 ನೇ ವರ್ಷದ ಆಚರಣೆ ನಿಮಿತ್ತ ತಾಲ್ಲೂಕಿನ ವಿಶೇಷ ಸಾಧಕರಾದ ಶ್ರೀ ಕೆ.ವಿ. ಸತ್ಯನಾರಾಯಣರಾವ್ ಕೂಳೂರು, ಇವರಿಗೆ ರಜತ ಕಿರೀಟ ಪ್ರಧಾನ ಮತ್ತು ರಾಜ್ಯದ 20 ತಾಲ್ಲೂಕುಗಳ ಬ್ರಾಹ್ಮಣ ಸಂಘದ ಅಧ್ಯಕ್ಷರುಗಳಿಗೆ ಸನ್ಮಾನ ನಡೆಸಲಾಯಿತು.

ದಿನಾಂಕ:- 03/06/2019 ರಿಂದ 08/06/2019 ರ ವರೆಗೆ ಸಂಜೆ 4 ಗಂಟೆಯಿಂದ 5 ಗಂಟೆವರೆವಿಗೆ ತೈತರೀಯೋಪನಿಷತ್ ಶಂಕರ ಭಾಷ್ಯ ಪ್ರವಚನ ಮಾಲಿಕೆ “ ಭಾಷಾಮೃತವಾಹಿನಿ” ಎಂಬ ಧಾರ್ಮಿಕ ಉಪನ್ಯಾಸ ನೆರವೇರಿತು. ಈ ಪ್ರಯುಕ್ತ ದಿನಾಂಕ 07/06/2019 ರಂದು ಸಂಜೆ 4 ಗಂಟೆಗೆ ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಸ್ವಾಮಿಗಳು ಆಗಮಿಸಿ ಆಶೀರ್ವಚನ ನೀಡಿದರು.

ದಿನಾಂಕ:- 09/05/2019 ರಂದು ನಡೆದ ಧರ್ಮೋಪನಯನ, ಗಾಯತ್ರೀ ಹೋಮ, ಗಣಹೋಮ, ಸಾಧಕರಿಗೆ ಸನ್ಮಾನ ಮತ್ತು ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಆಧ್ಯಾತ್ಮಿಕ ಚಿಂತಕರು, ಪೂರ್ಣಪ್ರಜ್ಞಾ ವಿದ್ಯಾ ಪೀಠ, ಬೆಂಗಳೂರು, ಇವರಿಂದ “ಗಾಯತ್ರೀ ಉಪದೇಶ” ಎನ್ನುವ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಪಟ್ಟಣ ಸಮಿತಿ 6 ನೇ ಘಟಕದ ಸಹಯೋಗದೊಂದಿಗೆ

2018-19 ಈ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಇವರ ಶತಮಾನೋತ್ಸವ ಆಚರಣೆ ನಿಮಿತ್ತ ತಾಲ್ಲೂಕು ಮಟ್ಟದ ಭಜನಾ ಸ್ಪರ್ದೆ ನಡೆಸಲಾಯಿತು. ವಿಪ್ರ ಯುವ ವೇದಿಕೆಯವರು ಸಹಕರಿಸಿದರು,ಬಾಳೇಬೈಲು ಘಟಕದ ಸಹಯೋಗದಲ್ಲಿ ಶ್ರೀಮತಿ ವಿನುತಾ ಮುರಳೀಧರ್ ರವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಕವಿಗೋಷ್ಠಿ ನಡೆಯಿತು,ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ವಿಪ್ರ ಯುವ ವೇದಿಕೆ ಇವರ ಸಹಯೋಗ ದಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಇವರ ಶತಮಾನೋತ್ಸವ ಆಚರಣೆ ನಿಮಿತ್ತ ಶ್ರೀ ವಿನಯ ಯಜ್ಞನಾರಾಯಣ ಮತ್ತು ತಂಡ, ಶಿವಮೊಗ್ಗ ಇವರಿಂದ ಕವಿ, ಕಾವ್ಯ ಗಾಯನ ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು. ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ, ಶಿವಮೊಗ್ಗ ಇದರ ನಿರ್ದೇಶಕರಾಗಿ ಮತ್ತು ಶಿಮೂಲ್, ಶಿವಮೊಗ್ಗ ಇದರ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ ತುಂಬರಮನೆ ಚಂದ್ರಶೇಖರ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ಮಾತಾ ಮಹಿಳಾ ಯಕ್ಷ ಟ್ರಸ್ಟ್ (ರಿ) ಶಿವಮೊಗ್ಗ- ಇವರಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಪ್ರಸಂಗ ಜಿಲ್ಲಾ ಬ್ರಾಹ್ಮಣ ಮಹಾಸಭಾ(ರಿ) ಹಾಗೂ ಪಟ್ಟಣ ಸಮಿತಿ 6 ನೇ ಘಟಕದ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಇವರ ಶತಮಾನೋತ್ಸವ ಆಚರಣೆ ನಿಮಿತ್ತ ನೆರವೇರಿಸಲಾಯಿತು,

ದಿನಾಂಕ:-24/12/2018 ರಂದು ಸುಮಾರು ಒಂದೂವರೆ ಕೋಟಿರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ” ಗಾಯತ್ರೀ ವಸತಿ ಸಮುಚ್ಚಯ” ವನ್ನು ಲೋಕಾರ್ಪಣೆ ಮಾಡಲಾಯಿತು. ಡಾ. ಜಿ. ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀ ಆಧಿ ಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು, ಶ್ರೀ ಕೆ.ಸಿ. ನಟರಾಜ ಭಾಗವತರು, ಅಧ್ಯಕ್ಷರು ಜಿಲ್ಲಾ ಬ್ರಾಹ್ಮಣ ಮಹಾ ಸಭಾ(ರಿ) ಶಿವಮೊಗ್ಗ ಮತ್ತು ದಾನಿಗಳಾದ ಶ್ರೀಮತಿ ಶಶಿಕಲಾ ಮತ್ತು ಶ್ರೀ ಹೆಚ್.ಜಿ. ಚಂದ್ರಶೇಖರ್ ದಂಪತಿಗಳು ಹೊದಲ, ತುಮಕೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕಾರೀ ಸಮಿತಿಯ ತೀರ್ಮಾನದಂತೆ,”ನಮ್ಮ ಸಮಾಜದ ಪ್ರತೀ ಮನೆಗೆ ಬೇಟಿ” ಕಾರ್ಯಕ್ರಮವನ್ನು ಹಮ್ಮಿಕೊಂಡು ವಸತಿ ಸಮುಚ್ಚಯದ ಧನ ಸಂಗ್ರಹಣೆ ಮತ್ತು ಸಂಘಟನೆಯನ್ನು ಗುರಿಯಾಗಿಟ್ಟುಕೊಂಡು, ಇಡೀ ತಾಲ್ಲೂಕಿನ 5 ಹೋಬಳಿಗಳಲ್ಲಿ 108 ದಿನಗಳ ಕಾಲ ಒಟ್ಟು 2178 ಮನೆಗಳನ್ನು ಬೇಟಿಮಾಡಿ 86 ಲಕ್ಷಗಳಿಗೂ ಮಿಕ್ಕಿ ಧನ ಸಂಗ್ರಹಣೆ ಮಾಡಲಾಯಿತು.ವಿಪ್ರ ಯುವ ವೇದಿಕೆ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಸಾಂಸ್ಕತಿಕ ಮತ್ತು ಶೈಕ್ಷಣಿಕ ಸ್ಪರ್ದೆ ನೆರವೇರಿಸಲಾಯಿತು,ಬಾಳೇಬೈಲು ಘಟಕದ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂದು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.ಗಾಯತ್ರೀ ಮಹಿಳಾ ಯಕ್ಷಗಾನ ಮಂಡಳಿ ಇವರ ಸಹಯೋಗದಲ್ಲಿ ದಿನಾಂಕ 10/04/2019 ರಿಂದ 24/04/2019 ರವರೆಗೆ ಯಕ್ಷ ನೃತ್ಯ ಬೇಸಿಗೆ ಶಿಬಿರ ನಡೆಯಿತು. ಅದೇ ದಿನ ಸಂಜೆ ಯಕ್ಷ ನೃತ್ಯ ಪ್ರದರ್ಶನ ಮತ್ತು ಭಕ್ತ ಸುಧನ್ವ ಎಂಬ ಯಕ್ಷಗಾನ ಪ್ರಸಂಗವನ್ನು ಅಭಿನಯಿಸಿದರು. ಕಾರ್ಯಕ್ರಮದಲ್ಲಿ ಡಾ. ಜಿ. ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀ ಆಧಿ ಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು, ಇವರು ಭಾಗವಹಿಸಿದ್ದರು. ವಿಪ್ರ ಯುವ ವೇದಿಕೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ನಡೆಸಲಾಯಿತು.

2017-18 ದಿನಾಂಕ:- ಈ ಸಾಲಿನಲ್ಲಿ ಶ್ರೀ ಗುತ್ಯಮ್ಮ ಯಕ್ಷಗಾನ ಮತ್ತು ಸಾಂಸ್ಕೃತಿಕ ಕಲಾ ಕೇಂದ್ರ, ತೀರ್ಥಹಳ್ಳಿ, ಇವರು ಕಂಸವಧೆ ಪೌರಾಣಿಕ ಪ್ರಸಂಗವನ್ನು ಅಭಿನಯಸಿದರು,ತಾಲ್ಲೂಕು ಮಟ್ಟದ ಭಜನಾ ಸ್ಫರ್ದೆ ನಡೆಯಿತು,ಡಾಕ್ಟರ್ಸ್ ಅಸೋಸಿಯೇಶನ್ ಮತ್ತು ಭಾರತೀಯ ವೈದ್ಯರ ಸಂಘ, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರಿಂದ ಶ್ರೀ ಕೃಷ್ಣ ಸಂಧಾನ ತಾಳ ಮದ್ದಲೆ ಕಾರ್ಯಕ್ರಮ ನಡೆಯಿತು,6 ನೇ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆಗಳು ಮತ್ತು ಪರೀಕ್ಷೆ ಎದುರಿಸುವುದು ಹೇಗೆ ಎಂಬ ಮಾಹಿತಿ ಶಿಬಿರ ನಡೆಯಿತು,ಬಾಳೇಬೈಲು ಘಟಕದ ಸಹಯೋಗದೊಂದಿಗೆ ಕಲಶಾಲಂಕಾರ ಮತ್ತು ಆರೋಗ್ಯದರಿವು ಮಾಹಿತಿ ಶಿಬಿರ ನಡೆಸಲಾಯಿತು,

ಬಾಳೇಬೈಲು ಘಟಕದ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಶಿಬಿರ ನಡೆಸಲಾಯಿತು,ಗಾನ ಶರಧಿ, ಅಂಬುತೀರ್ಥ ಸಂಸ್ಥೆ ಮತ್ತು ವಿಪ್ರ ಯುವ ವೇದಿಕೆ ಇವರ ಸಹಯೋಗದಲ್ಲಿ ಭಜನಾ ತರಬೇತಿ ಶಿಬಿರ ನಡೆಯಿತು,ತಾಲ್ಲೂಕಿನ ವಿಪ್ರ ಭಾಂದವರಿಗೆ ತಾಲ್ಲೂಕು ಮಟ್ಟದ ಸಾಂಸ್ಕøತಿಕ ಸ್ಪರ್ದೆ ನಡೆಯಿತು,ವಿಪ್ರ ಯುವ ವೇದಿಕೆ ಸಹಕಾರದೊಂದಿಗೆ ಮಕ್ಕಳ ಬೇಸಿಗೆ ಶಿಬಿರ ನಡೆಯಿತು,ಧರ್ಮೋಪನಯನ, ಗಾಯತ್ರೀ ಹೋಮ, ಗಣಹೋಮ, ಸಾಧಕರಿಗೆ ಸನ್ಮಾನ ಮತ್ತು ಶ್ರೀ ಬಿ.ಜಿ.ಕೃಷ್ಣಮೂರ್ತಿ ಕಾಸರವಳ್ಳಿ, ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿಆಯ್ಕೆಯಾದ ಶ್ರೀ ಎ.ಆರ್. ಪ್ರಸನ್ನಕುಮಾರ್ ಇವರನ್ನು ಸಂಘವು ಸನ್ಮಾನಿಸಿತು.

ದಿನಾಂಕ:- 30/04/2017 ರಂದು ನಡೆದ ಧರ್ಮೋಪನಯನ, ಗಾಯತ್ರೀ ಹೋಮ, ಗಣಹೋಮ, ಸಾಧಕರಿಗೆ ಸನ್ಮಾನ ಮತ್ತು ಡಾ. ಗಣೇಶ ಈಶ್ವರ ಭಟ್ಟರು ಶೃಂಗೇರಿ, ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು,ಪಟ್ಟಣ ಸಮಿತಿ 6 ನೇ ಘಟಕದ ಸಹಯೋಗದಲ್ಲಿ ಯಕ್ಷಕೂಟ ಶಿವಮೊಗ್ಗ ಇವರಿಂದ ಮಹಿಳಾ ಯಕ್ಷಗಾನ ತಾಳಮದ್ದಲೆ ನಡೆಯಿತು,ಪಟ್ಟಣ ಸಮಿತಿ 6 ನೇ ಘಟಕದ ಸಹಯೋಗದಲ್ಲಿ ಗೆಜ್ಜೆ ವಸ್ತ್ರ ಪ್ರದರ್ಶನ ಮತ್ತು ತರಬೇತಿ ಶಿಬಿರ ನಡೆಸಲಾಯಿತು,ಬಾಳೇಬೈಲು ಘಟಕದ ಸಹಯೋಗದೊಂದಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

 

2016-17 ದಿನಾಂಕ:- 18/09/2016 ರಂದು ವಿಪ್ರ ಯುವ ವೇದಿಕೆ ಉದ್ಘಾಟನೆ ಮತ್ತು ತಾಲ್ಲೂಕು ಮಟ್ಟದ ಭಜನಾ ಸ್ಪರ್ದೆ ಕಾರ್ಯಕ್ರಮಗಳು ನಡೆಯಿತು, ಬಾಳೇಬೈಲು ಘಟಕದ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಶಿಬಿರ ನಡೆಸಲಾಯಿತು,ಸೀರೆಗೆ ಅಲಂಕರಿಸಿ ಕುಚ್ಚು ಕಟ್ಟುವ ತರಬೇತಿ ಶಿಬಿರ ನಡೆಸಲಾಯಿತು,ವಿಪ್ರ ಮಹಿಳೆಯರಿಗೆ ಬಟ್ಟೆ ಮೇಲೆ ಪೈಂಟಿಂಗ್ ಶಿಬಿರ ನಡೆಸಲಾಯಿತು,ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಪರ್ದೆ ನಡೆಸಲಾಯಿತು,ಮಹಾಶಿವರಾತ್ರಿ ನಿಮಿತ್ತ ಅಖಂಡ ಭಜನೆ ಕಾರ್ಯಕ್ರಮ ನಡೆಸಲಾಯಿತು,ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ನಡೆಸಲಾಯಿತು.

ದಿನಾಂಕ:- 5/5/2016 ಮತ್ತು 6/5/2016 ರಂದು ಅಕ್ಷರ ಲಕ್ಷ ಗಾಯತ್ರೀ ಹೋಮ, ಬ್ರಹ್ಮೋಪದೇಶ,ಭಜನೆ, ಮಹಿಳಾ ಯಕ್ಷಗಾನ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಡಾ. ಕೆ.ಪಿ.ಪುತ್ತೂರಾಯ ಹಿರಿಯ ಪ್ರಾದ್ಯಾಪಕರು ಅಂತರಾಷ್ಟ್ರೀಯ ಮೆಡಿಕಲ್ ಕಾಲೇಜು ಬೆಂಗಳೂರು ಇವರಿಂದ ಧಾಮರ್ಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

2015-16 ಸಂಘದ ರಜತ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ದಿನಾಂಕ 12/09/ 2015 ರಂದು ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಹೃದ್ರೋಗ, ನರ ವಿಭಾಗ ಮತ್ತು ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಗೈನೋಕಾಲಜಿ ವಿಭಾಗ ಹಾಗೂ ನೊವಾರ್ಟಿಸ್ ಕಂಪನಿಯ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರ ನಡೆಸಲಾಯಿತು.ಸುಮಾರು 1500 ಜನ ಈ ಶಿಬಿರದ ಪ್ರಯೋಜನವನ್ನು ಪಡೆದಿರುತ್ತಾರೆ,ಇಡಗುಂಜಿ ಯಕ್ಷಗಾನ ಮಂಡಳಿವತಿಯಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ದಿನಾಂಕ:- 29/12/2015 ರಂದು ಎಡತೊರೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಸ್ವಾಮಿಗಳವರು ಗಾಯತ್ರೀ ಮಂದಿರದಲ್ಲಿ ಸೌಂದರ್ಯ ಲಹರೀ ಪಾರಾಯಣೋತ್ಸವದ ಅಂಗವಾಗಿ ಆಶೀರ್ವಚನ ನೀಡಿದರು.

ಜನವರಿ 22 ರಿಂದ 27 ರವರೆಗೆ ಯಜು ಸಂಹಿತಾ ಯಾಗ,ಸಾಮ ಸಂಹಿತಾ ಯಾಗ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವೀಯಾಗಿ ನಡೆಯಿತು. ಅದೇ ದಿನ ಗಾಯತ್ರೀ ವಸತಿ ಸಮುಚ್ಚಯದ ಶಿಲಾನ್ಯಾಸ ನೆರವೇರಿಸಲಾಯಿತು,ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಎ ವೆಂಕಟೇಶಪ್ಪ ಇವರಿಂದ ವಿದ್ಯಾರ್ಥಿಗಳಿಗೆ ವೃತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು,10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ಉಪನ್ಯಾಸ ಮತ್ತು ಮಾಹಿತಿ ಶಿಬಿರ ನಡೆಸಲಾಯಿತು,ಒಂದು ದಿನ ಕೃಷಿ ವಿಚಾರ ಸಂಕಿರಣ ನಡೆಸಲಾಯಿತು,ಮಹಿಳೆಯರ ಆರೋಗ್ಯ ಶಿಬಿರ ನಡೆಸಲಾಯಿತು.ದಿನಾಂಕ:- 5/5/2016 ಮತ್ತು 6/5/2016 ರಂದು ಅಕ್ಷರ ಲಕ್ಷ ಗಾಯತ್ರೀ ಹೋಮ, ಬ್ರಹ್ಮೋಪದೇಶ,ಭಜನೆ, ಮಹಿಳಾ ಯಕ್ಷಗಾನ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಡಾ. ಕೆ.ಪಿ.ಪುತ್ತೂರಾಯ ಹಿರಿಯ ಪ್ರಾದ್ಯಾಪಕರು ಅಂತರಾಷ್ಟ್ರೀಯ ಮೆಡಿಕಲ್ ಕಾಲೇಜು ಬೆಂಗಳೂರು ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

2014-15 ಪ್ರಸಕ್ತ ಸಾಲಿನಲ್ಲಿ ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ವಿದ್ವಾನ್ ಶ್ರೀಕಂಠ ಭಟ್ಟರು ಚಿಕ್ಕಮಗಳೂರು, ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

ದಿನಾಂಕ:-21/06/2015 ರಿಂದ 27/06/2015 ರ ವರೆಗೆ ಶಾಕಲ ಋಕ್ ಸಂಹಿತಾ ಯಾಗ ಮತ್ತು ಭಾಗವತ ಸಪ್ತಾಹ ಕಾರ್ಯಕ್ರಮಗಳು ಯಶಸ್ವೀಯಾಗಿ ನಡೆಯಿತು.

2013-14 ತೀರ್ಥಹಳ್ಳಿ ತಾಲ್ಲೂಕಿನ ಸಾರ್ವಜನಿಕರ ಅನುಕೂಲಕ್ಕಾಗಿ ಆಧಾರ್ ಕಾರ್ಡ್ ನೋಂದಣಿಗಾಗಿ ದಿನಾಂಕ 18/09/ 2013 ರಿಂದ ಒಂದು ತಿಂಗಳು ಗಾಯತ್ರೀ ಮಂದಿರವನ್ನು ಉಚಿತವಾಗಿ ನೀಡಲಾಗಿದ್ದು ಸುಮಾರು 5000 ಜನ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ಡಾ. ಕೆ.ಪಿ.ಪುತ್ತೂರಾಯ ಹಿರಿಯ ಪ್ರಾದ್ಯಾಪಕರು ಅಂತರಾಷ್ಟ್ರೀಯ ಮೆಡಿಕಲ್ ಕಾಲೇಜು ಬೆಂಗಳೂರು ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

ದಿನಾಂಕ:- 27/03/ 2013 ರಂದು ಸಕ್ರೆ ಶ್ಯಾಮಾಚಾರ್ ದತ್ತಿ ಕಾರ್ಯಕ್ರಮದ ಅಂಗವಾಗಿ ಶ್ರೀ ನಟೇಶ್ ಕಾಸರವಳ್ಳಿ ಇವರು ಪ್ರವಚನ ನಡೆಸಿಕೊಟ್ಟರು. ಶಿವಮೊಗ್ಗ ಮಹಿಳಾ ಯಕ್ಷಗಾನ ತಂಡದವರು ಯಕ್ಷಗಾನ ಪ್ರದರ್ಶನ ನೀಡಿದರು,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ಡಾ. ಕೃಷ್ಣಮೂರ್ತಿ ನಿಟಿಲಾಪುರ ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

ಶ್ರೀ ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಮತ್ತು ಶ್ರೀ ಪಿ.ವಿ. ಕೃಷ್ಣ ಭಟ್ಟರು ವಿಧಾನ ಪರಿಷತ್ ಸದಸ್ಯರು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ (ರಿ) ಶಿವಮೊಗ್ಗ ಇಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಕೆ.ಎಸ್. ನಾರಾಯಣರಾವ್, ಕಲ್ಲೋಣಿ ಇವರಿಗೆ ಸಂಘವು ಅವರಿಗೆ ಅಭಿನಂದನೆ ಸಲ್ಲಿಸಿತು

ದಿನಾಂಕ:- 27/03/ 2013 ರಂದು ಸಕ್ರೆ ಶ್ಯಾಮಾಚಾರ್ ದತ್ತಿ ಕಾರ್ಯಕ್ರಮದ ಅಂಗವಾಗಿ ಶ್ರೀ ನಟೇಶ್ ಕಾಸರವಳ್ಳಿ ಇವರು ಪ್ರವಚನ ನಡೆಸಿಕೊಟ್ಟರು. ಶಿವಮೊಗ್ಗ ಮಹಿಳಾ ಯಕ್ಷಗಾನ ತಂಡದವರು ಯಕ್ಷಗಾನ ಪ್ರದರ್ಶನ ನೀಡಿದರು,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ಡಾ. ಕೃಷ್ಣಮೂರ್ತಿ ನಿಟಿಲಾಪುರ ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

ಶ್ರೀ ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಮತ್ತು ಶ್ರೀ ಪಿ.ವಿ. ಕೃಷ್ಣ ಭಟ್ಟರು ವಿಧಾನ ಪರಿಷತ್ ಸದಸ್ಯರು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ (ರಿ) ಶಿವಮೊಗ್ಗ ಇಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಕೆ.ಎಸ್. ನಾರಾಯಣರಾವ್, ಕಲ್ಲೋಣಿ ಇವರಿಗೆ ಸಂಘವು ಅವರಿಗೆ ಅಭಿನಂದನೆ ಸಲ್ಲಿಸಿತು

2012-13 ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಮಾಜದವತಿಯಿಂದ ರೂ.25000/- ಗಳನ್ನು ದೇಣಿಗೆಯಾಗಿ ನೀಡಲಾಗಿದೆ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರು, ಪದಾಧಿಕಾರಿಗಳು ಸಂಘಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ವಸತಿ ನಿಲಯಕ್ಕೆ ರೂ. 75000/-ಗಳ ದೇಣಿಗೆ ನೀಡಲಾಗಿದೆ.

2011-12 ದಿನಾಂಕ:- 07/01/2012 ರಂದು ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾದೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಸ್ವಾಮಿಗಳವರ ದಿವ್ಯ ಸಾನ್ನಿದ್ಯದಲ್ಲಿ ದಶಶ್ಲೋಖೀ ಸಮರ್ಪಣಾ ಕಾರ್ಯಕ್ರಮ ನಡೆಯಿತು,ತಾಲ್ಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ಯಶಸ್ವೀಯಾಗಿ ನಡೆಸಲಾಯಿತು,ನಡೆದ ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ವೇ|| ಶ್ರೀ ಅರುಣ ಅವಧಾನಿಗಳು, ವೇದಾಂತಿಗಳು ಮತ್ತೂರು ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

2010-11 ಈ ಸಾಲಿನಲ್ಲಿ ಅತ್ಯುನ್ನತ ವೈದ್ಯಕೀಯ ಅಧ್ಯಯನಕ್ಕೆ ಆಯ್ಕೆಯಾದ ಡಾ. ಎ.ಜೆ. ಅಶ್ವಲ್ ಮತ್ತು ಎಂ.ಬಿ.ಬಿ.ಎಸ್. ನಲ್ಲಿ ಸ್ವರ್ಣ ಪದಕ ವಿಜೇತ ಡಾ. ದೃವ ಐತಾಳ್ ರವರನ್ನು ಸನ್ಮಾನಿಸಲಾಯಿತು.
ಡಾ. ಎಸ್.ಎಲ್. ಬೈರಪ್ಪ ನವರೊಂದಿಗೆ ಸಂವಾದ ಕಾರ್ಯಕ್ರಮ ಮತ್ತು ಮಹಿಳಾ ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮ ನಡೆಯಿತು,ವಾಸ್ತು ಹೋಮ, ರಾಕ್ಷೋಘ್ನ ಹೋಮ, ಗಣಹೋಮ ಮತ್ತು ಧರ್ಮೋಪನಯನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಜನಪ್ರತಿನಿಧಿಗಳಾದ ಶ್ರೀಮತಿ ಶುಭಾ ಕೃಷ್ಣಮೂರ್ತಿ, ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಶ್ರೀಮತಿ ಭಾರತೀ ಸುರೇಶ್, ಸದಸ್ಯರು,ತಾಲ್ಲೂಕು ಪಂಚಾಯತಿ, ಎ.ಪಿ. ಎಂ.ಸಿ. ಸದಸ್ಯರುಗಳಾದ ಶ್ರೀ ಕೆ.ಎಂ. ಜಯಶೀಲ,ಶ್ರೀ ರಾಘವೇಂದ್ರ ಚಕ್ಕೋಡಬೈಲು ಮತ್ತು ಡಾ. ಸದಾಶಿವ ನಿಲುವಾಸೆ ಇವರನ್ನು ಅಭಿನಂದಿಸಲಾಯಿತು.

ದಿನಾಂಕ:- 04/02/2010 ರಂದು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರು ತೀರ್ಥಹಳ್ಳಿಗೆ ಪ್ರಪ್ರಥಮ ಬಾರಿಗೆ ಆಗಮಿಸಿದಾಗ ಸಂಘದವತಿಯಿಂದ ಶ್ರೀ ಶ್ರೀ ಶ್ರೀ ಗಳವರು ಗಾಯತ್ರೀ ಮಂದಿರದಲ್ಲಿ ಶ್ರೀ ಚಂದ್ರಮೌಳೀಶ್ವರ ದೇವರ ಮಹಾಪೂಜೆಯನ್ನು ನೆರವೇರಿಸಿ ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.

2009-10 ದಿನಾಂಕ:-08/12/2009 ರಂದು ದಿ. ಸಕ್ಕರೆ ಶ್ಯಾಮಾಚಾರ್ಯರ ದತ್ತಿ ನಿಧಿ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ರಘುಭೂಷಣ ತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿದ್ಯದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ವಿದುಷಿ ಶ್ರೀಮತಿ ಅರುಂಧತಿ ಮತ್ತು ವಿದುಷಿ ಕು. ಎಂ.ಎಸ್. ಲತಾ ಇವರುಗಳನ್ನು ಪುರಸ್ಕರಿಸಲಾಯಿತು.

 

ಈ ಸಂದರ್ಭದಲ್ಲಿ ಸಂಘದವತಿಯಿಂದ ಪಾದಪೂಜೆ, ಬಿಕ್ಷಾವಂದನೆ ಸಲ್ಲಿಸಲಾಯಿತು, ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವವನ್ನು ಗಾಯತ್ರೀ ಮಂದಿರದಿಂದ ಪ್ರಾರಂಭಿಸಿ ಶ್ರೀ ಮಾರಿಕಾಂಬ ದೇವಸ್ಥಾನದವರೆವಿಗೂ ಬಹು ವಿಜೃಂಭಣೆಯಿಂದ ನಡೆಸಲಾಯಿತು.,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ಶ್ರೀ ನೆಲ್ಲಿಸರ ಶ್ರೀನಿವಾಸ ರಾವ್ ಇವರ ಸೇವೆಯನ್ನು ಸ್ಮರಿಸಿ ಅವರಿಗೆ ಸಂಘದವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

2008-09 ದಿನಾಂಕ:- 13/05/2008 ರಂದು ಎಡತೊರೆಯ ಯೋಗಾನಂದ ಸರಸ್ವತೀ ಮಠದ ಪೀಠಾದೀಶರಾದ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆಸೌಂದರ್ಯ ಲಹರೀ ಪಠಣಾ ಕಾರ್ಯಕ್ರಮ ನಡೆಯಿತು, ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ವಿಶೇಷವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಶ್ರೀ ಕೆ. ಗೋವಿಂದ ಭಟ್ಟರು ಹೆದ್ದೂರು ಇವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಸಂಘದ ಹಿರಿಯ ಉಪಾಧ್ಯಕ್ಷರು, ದಾನಿಗಳಾದ ಶ್ರೀ ವಿ.ಹೆಚ್. ನಾಗೇಂದ್ರ ಜೋಯ್ಸ್ ಇವರು ಸಂಘಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

2007-08
ಪ್ರಸಕ್ತ ಸಾಲಿನಲ್ಲಿ ತಾಲ್ಲೂಕು ಪುರೋಹಿತ ಮತ್ತು ಅರ್ಚಕ ವೃಂದದವರು ಲೋಕ ಕಲ್ಯಾಣಾರ್ಥವಾಗಿ ಲಕ್ಷ್ಮೀ ನಾರಾಯಣ ಹೃದಯ ಹೋಮವನ್ನು ಗಾಯತ್ರೀ ಮಂದಿರದಲ್ಲಿನಡೆಸಿದರು. ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾಪೂಜೆ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳವರು ಪುತ್ತಿಗೆ ಮಠ ಇವರಿಂದ ಆಶೀರ್ವಚನ ಮತ್ತು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮಗಳು ನಡೆದವು.

ತೀರ್ಥಹಳ್ಳಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ರೇವತಿ ಅನಂತಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಜಿ.ಕೆ.ಜಯರಾಂ,ಗುಡ್ಡೇಕೊಪ್ಪ, ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಶ್ರೀ ವೆಂಕಟೇಶ್ ಪಟವರ್ದನ್, ರಾಜ್ಯ ಸರ್ಕಾರದ ಏಕಲವ್ಯ ಪ್ರಶಸ್ತಿ ವಿಜೇತ ಚಿ|| ಶ್ರೀರಾಮ್ ಸರ್ಜಾ ಇವರನ್ನು ಅಭಿನಂದಿಸಲಾಯಿತು. ಸಾಗರದ ಮಾಜಿ ವಿಧಾನ ಸಭಾ ಸದಸ್ಯರಾದ ಶ್ರೀ ಎಲ್.ಟಿ. ತಿಮ್ಮಪ್ಪ ಹೆಗಡೆಯವರು ಅಭಿನಂದನಾ ಭಾಷಣ ಮಾಡಿದರು,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ಪ್ರೊ. ಎಸ್.ವಿ. ಶಾಸ್ರ್ತಿ ಶಿವಮೊಗ್ಗ ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.

2006-07
ಈ ಸಾಲಿನಲ್ಲಿ ತಾಲ್ಲೂಕು ಪುರೋಹಿತ ಮತ್ತು ಅರ್ಚಕ ವೃಂದದವರು ಲೋಕ ಕಲ್ಯಾಣಾರ್ಥವಾಗಿ ರುದ್ರೈಕಾದಶನೀಯ ಹೋಮವನ್ನು ಗಾಯತ್ರೀ ಮಂದಿರದಲ್ಲಿ ನಡೆಸಿದರು.ಇದೇ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರವರಿಂದ ಪ್ರವಚನ, ಕೃಷಿ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಮತ್ತು ನಿವಣೆ ಶ್ರೀ ಗಣೇಶ ಭಟ್ಟರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.
ಗಾಯತ್ರೀ ಮಂದಿರದ ನಿವೇಶನದ ನೊಂದಣಿಯನ್ನು ಉಚಿತವಾಗಿ ಮಾಡಕೊಟ್ಟು ಸಹಕರಿಸಿದ ಸಂಘದ ಕಾನೂನು ಸಲಹೆಗಾರರಾದ ಶ್ರೀ ವೈ. ಎ. ಪ್ರಭಾಕರ ಮತ್ತು ನಿವೇಶನದ ಮಾಲೀಕರಾಗಿದ್ದ ಶಾರದಾಪುರದ ಶ್ರೀ ಪುರುಷೋತ್ತಮ ರಾವ್ ಮತ್ತು ಮಕ್ಕಳಿಗೆ ಕಾರ್ಯಕಾರೀ ಸಮಿತಿಯು ಕೃತಜ್ಞತೆಯನ್ನು ಸಲ್ಲಿಸಿತು.

2005-06
ಈ ಸಾಲಿನಲ್ಲಿ ತಾಲ್ಲೂಕು ಪುರೋಹಿತ ಮತ್ತು ಅರ್ಚಕ ವೃಂದದವರು ಲೋಕ ಕಲ್ಯಾಣಾರ್ಥವಾಗಿ 108 ನಾರಿಕೇಳ ಹೋಮವನ್ನು ಗಾಯತ್ರೀ ಮಂದಿರದಲ್ಲಿ ನಡೆಸಿದರು,ಕು. ಪ್ರತಿಮಾ ಜಾಗಟಗಾರು ಇವರು ಹರಿಕಥಾಕಾಲಕ್ಷೇಪವನ್ನು ಗಾಯತ್ರೀ ಮಂದಿರದಲ್ಲಿ ನಡೆಸಿಕೊಟ್ಟರು.
ದಿನಾಂಕ:- 3/12/2005 ರಂದು ಶ್ರೀ ರಾಮಚಂದ್ರಾಪುರ ಮಠದವರು ಆಯೋಜಿಸಿದ್ದ “ ಭಾರತೀಯ ಗೋ ಯಾತ್ರೆ” ತೀರ್ಥಹಳ್ಳಿಗೆ ಆಗಮಿಸಿದಾಗ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು. ಅದೇ ದಿನ ನಡೆದ ಭಾರತೀಯ ಗೋ ತಳಿಗಳ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಸಕ್ರಿಯವಾಗಿ ಭಾಗವಹಿಸಲಾಯಿತು,ಜಿಲ್ಲಾ ಪಂಚಾಯತಿ ಶಿವಮೊಗ್ಗ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಭಾರತೀ ಮಂಜುನಾಥಯ್ಯ, ಕ್ಯಾಂಪ್ಕೋ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ ಹೆಚ್.ಎಂ. ಮಹಾಬಲ ಭಟ್ಟರು, ತೀರ್ಥಹಳ್ಳಿ ತಾಲ್ಲೂಕು ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ರೇವತಿ ಅನಂತಮೂರ್ತಿ ಮತ್ತು ಅಡಿಕೆ ಸುಲಿಯುವ ಯಂತ್ರವನ್ನು ವಿನ್ಯಾಸಗೊಳಿಸಿದ ಶ್ರೀ ಕುಂಟುವಳ್ಳಿ ವಿಶ್ವನಾಥ ಇವರನ್ನು ಸನ್ಮಾನಿಸಲಾಯಿತು,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಇದೇ ದಿನ ಬೆಂಗಳೂರಿನ ಪ್ರೊ. ಎಂ.ಆರ್. ನಾಗರಾಜು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು,

2004-05 ದಿನಾಂಕ:- 31/07/2004 ರಂದು ತಾಲ್ಲೂಕು ಪುರೋಹಿತ ಮತ್ತು ಅರ್ಚಕ ವೃಂದದವರು ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮವನ್ನು ನಡೆಸಿದರು. ಶ್ರೀ ಜಿ.ವಿ. ಮಂಜುನಾಥಯ್ಯನವರು ಹೊರತಂದ “ಅಧ್ಯಕ್ಷರ ನುಡಿ ಮಾಲಿಕೆ” ಪುಸ್ತಕ ಬಿಡುಗಡೆ ಮಾಡಲಾಯಿತು.2004 ರ ಸೆಪ್ಟೆಂಬರ್ 20.21 ಮತ್ತು 22 ರಂದು ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರವರು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಅಂಗವಾಗಿ ಆಗಮಿಸಿದ “ ಗಾಯತ್ರೀ ರಥಯಾತ್ರೆ” ಯನ್ನು ಸ್ವಾಗತಿಸಿ, ಬೀಳ್ಕೊಡಲಾಯಿತು. ಕಮಕೋಡು ನರಸಿಂಹ ಶಾಸ್ತ್ರಿಗಳ ಜನ್ಮ ಶತಾಬ್ದಿಯನ್ನು ಆಚರಿಸಲಾಯಿತು,ರೆಡ್ ಕ್ರಾಸ್ ಸಂಸ್ಥೆ ಸಹಯೊಗದೊಂದಿಗೆ “ಹೃದಯರೋಗ ಮತ್ತು ನರರೋಗ” ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು,ಧರ್ಮೋಪನಯನ, ಗಾಯತ್ರೀ ಹೋಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಇದೇ ದಿನ ಬೆಂಗಳೂರಿನ ಪ್ರೊ. ಹೆಚ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು,

ದಿನಾಂಕ:- 7/05/2004ರಂದು ಖ್ಯಾತ ಸಾಹಿತಿಗಳಾದ ಶ್ರೀ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು “ಚಿಂತನ” ಎನ್ನುವ ವಿಶಿಷ್ಠ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಈ ಕಾರ್ಯಕ್ರಮ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರಗಳಂದು ಯಶಸ್ವೀಯಾಗಿ ನಡೆಯಿತು.

2003-04 ಈ ಸಾಲಿನಲ್ಲಿ ನಡೆದ ಧರ್ಮೋಪನಯನ, ಗಾಯತ್ರೀ ಹೋಮ , ಕಾರ್ಯಕ್ರಮದಲ್ಲಿ ಶೃಂಗೇರಿಯ ಶ್ರೀ ಗಿರಿಧರ ಶಾಸ್ತ್ರಿಗಳು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು, ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.ನಮ್ಮ ಸಂಘದ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಶ್ರೀ ಜಿ.ಎಸ್. ನಾರಾಯಣರಾವ್‍ರವರು, ತೀರ್ಥಹಳ್ಳಿ ತಾಲ್ಲೂಕ್ ಪಂಚಾಯತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದರಿಂದಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಬಿ.ವಿ.ಎನ್ ಸುಬ್ರಹ್ಮಣ್ಯ ರವರು ಉಪಸ್ಥಿತರಿದ್ದರು. ಇದೇ ದಿನ ಕೃಷಿ ವಿಚಾರ ಸಂಕಿರಣ ನಡೆಯಿತು. ಈ ವಿಚಾರ ಸಂಕಿರಣದಲ್ಲಿ ಡಾ. ಎಂ.ಆರ್. ಸುದರ್ಶನ, ಡಾ. ನಂದಿನಿ ಮತ್ತು ಶ್ರೀ ಎಂ.ಜಿ. ಶಂಕರ್ ಉಪಸ್ಥಿತರಿದ್ದು, ಕೃಷಿಕರಿಗೆ ಉಪಯುಕ್ತ ಮಾಹಿತಿ ನೀಡಿದರು.

 

2002-03 ರ ಸಾಲಿನಲ್ಲಿ ನಡೆದ ಧರ್ಮೋಪನಯನ, ಗಾಯತ್ರೀ ಹೋಮ , ಗಣ ಹೋಮ ಕಾರ್ಯಕ್ರಮದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾ ಸ್ವಾಮಿಗಳವರು ಶ್ರೀ ರಾಮಚಂದ್ರಾಪುರ ಮಠ ಇವರು ಗಾಯತ್ರೀ ಮಂದಿರಕ್ಕೆ ಬೇಟಿ ನೀಡಿ ಅನುಗ್ರಹ ಪೂರ್ವಕ ಆಶೀರ್ವಾದ ನೀಡಿರುತ್ತಾರೆ. ವಿದ್ವಾನ್ ವಿ.ಎನ್. ಭಟ್ಟರು ಶಿವಮೊಗ್ಗ ಇವರು ಧಾರ್ಮಿಕ ಉಪನ್ಯಾಸ ನೀಡಿರುತ್ತಾರೆ.ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

2001-02 ದಿನಾಂಕ:- 17/05/2002 ರಂದು ಧರ್ಮೋಪನಯನ, ಗಾಯತ್ರೀ ಹೋಮ, ಸಾಧಕರಿಗೆ ಸನ್ಮಾನ ಮತ್ತು ವೇ||ಬ್ರ|| ಶ್ರೀ|| ವಾಸುದೇವ ಭಟ್ಟರು ಇವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳು ನಡೆಯಿತು.ತೀರ್ಥಹಳ್ಳಿ ನಗರದ ಸುಮಾರು 75 ಬ್ರಾಹ್ಮಣ ಮಹಿಳೆಯರು ಪಾಲ್ಗೊಂಡ ಸೌಂದರ್ಯಲಹರೀ ಅಧ್ಯಯನ ಶಿಬಿರವು ಮೂರು ತಿಂಗಳಕಾಲ ಗಾಯತ್ರೀ ಮಂದಿರದಲ್ಲಿ ಯಶಸ್ವೀಯಾಗಿ ನಡೆಯಿತು. ಸಮಾರೋಪ ಸಮಾರಂಭದಂದು ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ ಶ್ರೀಮತಿ ಲಕ್ಷ್ಮೀದೇವಮ್ಮ ಇವರನ್ನು ಸನ್ಮಾನಿಸಲಾಯಿತು.ಚಿಕ್ಕಮಗಳೂರು ಶ್ರೀ ಕಣ್ಣನ್ ರವರ ಹಾಸ್ಯ ರಸಾಯನ ಕಾರ್ಯಕ್ರಮ ಮತ್ತು ಶತಾವದಾನಿ ಶ್ರೀ ಆರ್. ಗಣೇಶ್ ರವರ ಅಷ್ಟಾವಧಾನ ಕಾರ್ಯಕ್ರಮ ಯಶಸ್ವೀಯಾಗಿ ನಡೆಯಿತು.

2000-01 ದಿನಾಂಕ:- 27/04/2001 ರಂದು ಧರ್ಮೋಪನಯನ, ಗಾಯತ್ರೀ ಹೋಮ, ಸಾಧಕರಿಗೆ ಸನ್ಮಾನ ಮತ್ತು ವೇ||ಬ್ರ|| ಶ್ರೀ|| ಹಂದಲಸು ಲಕ್ಷ್ಮೀ ನಾರಾಯಣ ಭಟ್ಟರು ಶಿವಮೊಗ್ಗ ಇವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳು ನಡೆಯಿತು.

ಆಗಸ್ಟ್15 ರಿಂದ 20 ರವರೆವಿಗೆ ಲೋಕ ಕಲ್ಯಾಣಕ್ಕಾಗಿ ವೇದ ಪಾರಾಯಣ ಪ್ರತಿಷ್ಠಾನ, ಬೆಂಗಳೂರು ಇವರು ಆಯೋಜಿಸಿದ ವೇದ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಗುಜರಾತ್ ಭೂ ಕಂಪ ಸಂತ್ರಸ್ತರ ನೆರವಿಗಾಗಿ ರೂ.15801/-ಗಳ ದೇಣಿಗೆ ಸಂಗ್ರಹಿಸಿ ಕಳುಹಿಸಲಾಯಿತು.
ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರವೇಶಕ್ಕಾಗಿ ಸಿ.ಇ.ಟಿ. ತರಬೇತಿಯನ್ನು ಒಂದು ತಿಂಗಳಕಾಲ ನಡೆಸಲಾಯಿತು. ಶೈಕ್ಷಣಿಕ ಸಮಿತಿಯ ಸಂಚಾಲಕರಾದ ಡಾ|| ಎನ್.ಎಸ್. ಮನೋಹರ ರಾವ್ ಇವರ ನೇತೃತ್ವದಲ್ಲಿ ನಡೆಯಿತು,ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋ. ಕೆ. ಎನ್. ಉರಾಳ್ ಮತ್ತು ಸಹೋದ್ಯೋಗಿಗಳು ಮತ್ತು ಸಿ. ಇ. ಟಿ ತರಬೇತಿಗೆ ಸಂಬಂದಿಸಿದ್ದು 92 ವಿದ್ಯಾರ್ಥಿಗಳು ಭಾಗವಹಿಸಿದ್ದರು.

1999-2000 ಕಾರ್ಗಿಲ್ ಸಂತ್ರಸ್ತರ ನಿಧಿಗೆ ಸಂಘದ ವತಿಯಿಂದ ರೂ. 20001/- ಗಳ ದೇಣಿಗೆ ನೀಡಲಾಯಿತು.ಸಂಘದ ಹೆಮ್ಮೆಯ ತ್ರೈಮಾಸಿಕ ಪತ್ರಿಕೆಯಾದ “ ವಿಪ್ರ ಭಾರತೀ” ಯನ್ನು ಪ್ರಾರಂಬಿಸಲಾಯಿತು.ಸಂಘದ ಹೆಮ್ಮೆಯ ತ್ರೈಮಾಸಿಕ ಪತ್ರಿಕೆಯಾದ ವಿಪ್ರ ಭಾರತಿಯನ್ನು ದಿನಾಂಕ 28-11-1999 ರಂದು ಡಾ॥ ನಿಖಿಲಾಪುರ ಕೃಷ್ಣಮೂರ್ತಿಯವರು ಬೆಡುಗಡೆ ಮಾಡಿದರು.

 

ದಿನಾಂಕ:-14/04/1999ರಂದು ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಗಾಯತ್ರೀ ಮಂದಿರವನ್ನು ವೀಕ್ಷಿಸಿ ಸಂಘದ ಚಟುವಟಿಕೆಗಳ ಬಗ್ಗೆ ತಿಳಿದು ಕರ್ನಾಟಕ ರಾಜ್ಯದಲ್ಲಿಯೇ ಅತ್ಯುತ್ತಮ ಕೆಲಸ ಮಾಡುತ್ತಿರುವ ಸಂಸ್ಥೆ ಇದಾಗಿದೆ ಎಂದು ತಿಳಿಸಿ ಮುಂದಿನ ಜನವರಿ/ ಫೆಬ್ರುವರಿಯಲ್ಲಿ ಹೊಸ ನಾಟಕವೊಂದರ ಪ್ರಥಮ ಪ್ರದರ್ಶನ ನೀಡುವುದಾಗಿ ಭರವಸೆ ನೀಡಿದ್ದಾರೆ.ಗಾಯತ್ರೀ ಹೋಮ ಧರ್ಮೋಪನಯನ,ಹಿರಿಯರಿಗೆ ಸನ್ಮಾನ ನಡೆಯಿತು, ಗಾಯತ್ರೀ ಮಂದಿರದಲ್ಲಿ ವಾಸ್ತು, ರಾಕ್ಷೋಘ್ನ ಹೋಮ ನಡೆಸಲಾಯಿತು. ವಿದ್ವಾನ್. ಗುರುಪಾದ ಕೆ ಹೆಗಡೆ ಸಾಗರ ಇವರು ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟರು. ಗಾಯತ್ರೀ ಮಂದಿರಕ್ಕೆ ಉಡುಪಿಯ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಬೇಟಿ ನೀಡಿ, ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ನಮ್ಮನ್ನು ಅನುಗ್ರಹಿಸಿರುತ್ತಾರೆ.

ದಿನಾಂಕ:- 05/03/1999 ರಂದು ಹೊರನಾಡಿನ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ಅನ್ನಪೂರ್ಣ ವಿಭಾಗವನ್ನು ಉದ್ಘಾಟಿಸಿದರು. ಅಗಡಿ ಶ್ರೀ ಕ್ಷೇತ್ರ ಆನಂದವನದ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿಗಳು ಅನುಗ್ರಹ ಭಾಷಣ ಮಾಡಿದರು.

ದಿನಾಂಕ:- 06/01/1999 ರಂದು ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾ ಸ್ವಾಮಿಗಳವರು ಶ್ರೀ ರಾಮಚಂದ್ರಾಪುರ ಮಠ ಇವರು ಗಾಯತ್ರೀ ಮಂದಿರಕ್ಕೆ ಬೇಟಿ ನೀಡಿ ಅನುಗ್ರಹ ಪೂರ್ವಕ ಆಶೀರ್ವಾದ ನೀಡಿರುತ್ತಾರೆ.

1998-99 ದಿನಾಂಕ:- 8/11/1998 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಶ್ರೀ ಸಿ.ವಿ.ಎಲ್. ಶಾಸ್ತ್ರೀಯವರು ಮತ್ತು ಇತರೆ ಪದಾಧಿಕಾರಿಗಳು ಗಾಯತ್ರೀ ಮಂದಿರವನ್ನು ಸಂದರ್ಶಿಸಿ ಸಂಘದ ಚಟುವಟಿಕೆಬಗ್ಗೆ ತಿಳಿದು ಅಪಾರ ಮೆಚ್ಚುಗೆಯನ್ನು, ಸಹಕಾರ ನೀಡುವ ಭರವಸೆ ನೀಡಿದ್ದಾರೆ

 

1997-98 ರಾಷ್ಟ್ರಪತಿ ಗೈಡ್ಸ್ ಪ್ರಶಸ್ತಿ ಪುರಸ್ಕೃತರಾದ ಕು.ಪೃಥ್ವಿ ಮತ್ತು ಕು. ಮಂದಸ್ಮಿತಾ ಇವರನ್ನು ಸನ್ಮಾನಿಸಲಾಯಿತು.

ಹೊರನಾಡಿನ ಶ್ರೀ ಆದಿಶಕ್ತ್ಮಾತಕ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು, ಸ್ಥಳೀಯ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರು ಮತ್ತು ಶಿವಮೊಗ್ಗ ಲೋಕಸಸಭಾ ಕ್ಷೇತ್ರದ ಸಂಸದರಾದ ಶ್ರೀ ಆಯನೂರು ಮಂಜುನಾಥರವರು ಗಾಯತ್ರೀ ಮಂದಿರಕ್ಕೆ ಬೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1997-98 ರಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಶಿವಮೊಗ್ಗ ಬ್ರಾಂಚಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಡಾ|| ಎನ್.ಎಸ್. ಮನೋಹರ ರಾವ್ ಇವರಿಗೆ “ಐ.ಡಿ.ಎ. ಬೆಸ್ಟ್ ಪ್ರೆಸಿಡೆಂಟ್” ಅವಾರ್ಡ್‍ನ್ನು ನೀಡಿದ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ದಿನಾಂಕ:- 29/05/1997 ರಂದು ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾ ಸ್ವಾಮಿಗಳವರು ಶ್ರೀ ರಾಮಚಂದ್ರಾಪುರ ಮಠ ಇವರು ಗಾಯತ್ರೀ ಮಂದಿರ ಸಮುಚ್ಚಯಕ್ಕೆ ಬೇಟಿ ನೀಡಿ ಕಟ್ಟಡ ಕಾರ್ಯಗಳನ್ನು ವೀಕ್ಷಿಸಿದ್ದಲ್ಲದೇ “ವೈಶ್ವಾನರ” ವಿಭಾಗದ ಪ್ರಾರಂಭೋತ್ಸವ ನೆರವೇರಿಸಿಕೊಟ್ಟು ರೂ. 51500/- ಗಳನ್ನು ಸುವರ್ಣ ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದ್ದಾರೆ.

1996-97 ಕಳೆದ ವರ್ಷ ಗೈಡ್ಸ್ ರಾಜ್ಯಪಾಲ ಪ್ರಶಸ್ತಿ ಪುರಸ್ಕೃತರಾದ ಕು. ಅರ್ಚನಾ, ಕು. ಅಕ್ಷಯಾ ಮತ್ತು ಕು. ಸಾಯಿಜ್ಯೋತಿ ಇವರುಗಳು ಈ ವರ್ಷ ರಾಷ್ಟ್ರಪತಿಗಳ ಪ್ರಶಸ್ತಿ ಪಡೆದಿದ್ದು ಅವರನ್ನು ಸಂಘವು ಅಭಿನಂದಿಸಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಶಂಕರ ಜಯಂತಿ ಆಚರಣೆ ನಿಮಿತ್ತ ಶ್ರೀ ಕೃಷ್ಣಾನಂದ ಮಠದಲ್ಲಿ ಧರ್ಮೋಪನಯನ, ಗಾಯತ್ರೀ ಹೋಮ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮಗಳು ನಡೆಯಿತು, ಸ್ಥಳಾವಕಾಶದೊಂದಿಗೆ ಶ್ರೀ ಶ್ರೀ ಕೃಷ್ಣಾನಂದ ತೀರ್ಥರು ಅನುಗ್ರಹ ಆಶೀರ್ವಾದ ನೀಡಿದರು. ನಿವೃತ್ತ ಪ್ರಾದ್ಯಾಪಕರಾದ ಶ್ರೀ ಎನ್. ಶ್ರೀನಿವಾಸ ಉಡುಪರು ಧಾರ್ಮಿಕ ಉಪನ್ಯಾಸ ನೀಡಿದರು.

1995-96 ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಜಿ.ವಿ. ಮಂಜುನಾಥಯ್ಯನವರು, ಸಂಸ್ಕೃತ ಶಿಕ್ಷಣವನ್ನು ಪ್ರೋತ್ಸಾಹಿಸುವುದಕ್ಕಾಗಿ ಮಾಸಿಕ ರೂ. 1500/- ಗಳನ್ನು ಕೊಡುತ್ತಿದ್ದು, ಈ ನಿಧಿಯಿಂದ ಸ್ಥಳೀಯ ಶ್ರೀ ಶಂಕರ ಭಗವತ್ಪಾದ ಸಂಸ್ಕೃತ ಕಾಲೇಜಿಗೆ ಪ್ರತಿ ತಿಂಗಳೂ ರೂ.500/- ಧನ ಸಹಾಯ ನೀಡಲಾಯಿತು.

ಐದನೇ ವರ್ಷದ ವಾರ್ಷಿಕ ಸಭೆ, ಬ್ರಹ್ಮೊಪದೇಶ ಮತ್ತು ಗಾಯತ್ರೀ ಹೋಮವನ್ನು ಮುಳಬಾಗಿಲು ಶ್ರೀ ಕೃಷ್ಣಾನಂದ ಮಠದಲ್ಲಿ ನಡೆಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಎಂ ವೆಂಕಟೇಶ್ ಇವರು ಶಿವಮೊಗ್ಗಕ್ಕೆ ವಾಸಸ್ಥಳ ಬದಲಾಯಿಸಿದ್ದರಿಂದ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡಿಗೆ ನೀಡಲಾಯಿತು. ಶಿವಮೊಗ್ಗಾದ ವಿದ್ವಾನ್ ವಿ.ಎನ್. ಭಟ್ಟರು ಧಾರ್ಮಿಕ ಪ್ರವಚನ ಕಾರ್ಯಕ್ರವನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ನಾಡಿನ ಪ್ರಸಿಧ್ಧ ಸಾಹಿತಿಗಳಾದ ಡಾ. ಎಸ್.ವಿ. ಪರಮೇಶ್ವರ ಭಟ್ಟರನ್ನು ಸನ್ಮಾನಿಸಲಾಯಿತು. ಪ್ರೊ. ಹೆಚ್.ವಿ. ನರಸಿಂಹಮೂರ್ತಿ, ಕುಂದಾಪುರ ಇವರು ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.

1994-95 ಉದ್ದೇಶಿತ ಗಾಯತ್ರೀ ಮಂದಿರದ ನಿರ್ಮಾಣಕ್ಕಾಗಿ ತೀರ್ಥಹಳ್ಳಿಯ ತುಂಗಾನದಿಯ ಸೇತುವೆ ಸಮೀಪ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ತಿರ 13.5 ಸಾವಿರ ಚದರಡಿಯ 4 ನಿವೇಶನಗಳನ್ನು ವಿವಿಧ ಹಂತಗಳಲ್ಲಿ ಖರೀದಿಸಿ ಗಾಯತ್ರೀ ಮಂದಿರದ ನಿರ್ಮಾಣಕಾರ್ಯ ಪ್ರಾರಂಬಿಸಲಾಯಿತು.

ವಾರ್ಷಿಕ ಸಭೆಯ ಸಂಧರ್ಭದಲ್ಲಿ ನಡೆದ ಬ್ರಹ್ಮೋಪದೇಶ ಮತ್ತು ಗಾಯತ್ರೀ ಹೋಮವನ್ನು ಏರ್ಪಡಿಸಲು ಸ್ಥಳಾವಕಾಶ ನೀಡಿ, ನಮ್ಮನ್ನು ಅನುಗ್ರಹಿಸಲು, ದ್ವಾರಕಾ ಸಂಸ್ಥಾನದ ಮುಳಬಾಗಿಲು ಶ್ರೀ ಕೃಷ್ಣಾನಂದ ಮಠದ ಶ್ರೀ ಶ್ರೀ ಕೃಷ್ಣಾನಂದ ತೀರ್ಥರು ಸಮ್ಮತಿಸಿ,ಸಹಕಾರನೀಡಿರುತ್ತಾರೆ.

 

ದ್ವಾರಕಾ ಸಂಸ್ಥಾನದ ಮುಳಬಾಗಿಲು ಶ್ರೀ ಕೃಷ್ಣಾನಂದ ಮಠದ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿಯವರು, ಬ್ರಹ್ಮೋಪದೇಶ ಗಾಯತ್ರೀ ಹೋಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಗ್ರಹ ಉಪನ್ಯಾಸ ನೀಡಿದರು. ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಧಾರ್ಮಿಕ ಪ್ರವಚನ ನೀಡಿದರು.

1993-94 ಜನವರಿ ತಿಂಗಳಿನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಬೃಹತ್ ಕ್ಯಾನ್ಸರ್ ತಪಾಸಣಾ ಶಿಬಿರ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ಮತ್ತು ಎನ್.ಆರ್. ಪುರ ವ್ಯಾಪ್ತಿಯನ್ನು ಹೊಂದಿದ್ದು, ಐದೂ ತಾಲ್ಲೂಕುಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಸುಮಾರು 25000 ಕ್ಕೂ ಹೆಚ್ಚಿನ ಮಾಹಿತಿ ಕೈಪಿಡಿಗಳನ್ನು ವಿತರಣೆ ಮಾಡಲಾಯಿತು.ಸುಮಾರು 1000 ಜನ ಈ ಶಿಬಿರದ ಪ್ರಯೋಜನ ಪಡೆದಿರುತ್ತಾರೆ.

1992-93 ಸಂಘವು ವಧೂ-ವರರ ಅನ್ವೇಷಣಾ ಕೇಂದ್ರವನ್ನು ಪ್ರಾರಂಭಿಸಿದ್ದು ಈ ವರೆವಿಗೆ 100 ಜನ ಅವಿವಾಹಿತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ದಿನಾಂಕ:- 14/05/1991 ರಂದು ಪ್ರಥಮ ತಾಲ್ಲೂಕು ಪ್ರತಿನಿಧಿಗಳ ಸಭೆ ಮತ್ತು ಕಾರ್ಯಕಾರೀ ಸಮಿತಿ ರಚನೆ ಮಾಡಲಾಯಿತು. ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು, ಪರ್ಯಾಯ ಪೀಠಾರೋಹಣಕ್ಕೆ ಮೊದಲು ತೀರ್ಥಹಳ್ಳಿಗೆ ಆಗಮಿಸಿದಾಗ
ಗೌರವ ಸಮರ್ಪಣೆ ಮಾಡಲಾಯಿತು. ಆದಿ ಚುಂಚನಗಿರಿ ಸ್ವಾಮೀಜಿಯವರು ತೀರ್ಥಹಳ್ಳಿಗೆ ಆಗಮಿಸಿದಾಗ ಸಂಘದವತಿಯಿಂದ ಭಕ್ತಿ ಪೂರ್ವಕವಾಗಿ ಗೌರವಿಸಲಾಯಿತು.

1991-92 ದಿನಾಂಕ:- 28/04/1991 ರಂದು ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಶ್ರೀ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ, ಇವರು ಉದ್ಘಾಟನೆ ಮತ್ತು ಆಶೀರ್ವಚನವನ್ನು ನೀಡಿರುತ್ತಾರೆ. ಮಾರ್ಗದರ್ಶನ ಮತ್ತು ಧಾರ್ಮಿಕ ಉಪನ್ಯಾಸವನ್ನು ಡಾ. ಎಂ.ಇ. ರಂಗಾಚಾರ್ ಪ್ರಾಧ್ಯಾಪಕರು, ಶಿವಮೊಗ್ಗ ಇವರು ನಡೆಸಿಕೊಟ್ಟಿರುತ್ತಾರೆ. ಸಭೆಯ ಅಧ್ಯಕ್ಷತೆಯನ್ನು ಶ್ರೀ ಎಂ ವೆಂಕಟೇಶ್ ಇವರು ವಹಿಸಿದ್ದರು.