No products in the cart.

Contacts

92 Bowery St., NY 10013

thepascal@mail.com

+1 800 123 456 789

1991 ರಲ್ಲಿ ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಪ್ರಾರಂಭವಾಗಿ ತಾಲ್ಲೂಕಿನಾದ್ಯಂತ ತನ್ನ ಚಟುವಟಿಕೆಯನ್ನು ವಿಸ್ತಾರಗೊಳಿಸಿದ್ದು ಸಮಾಜ ಬಾಂಧವರ ಒಮ್ಮತದ ಅಭಿಪ್ರಾಯದಂತೆ ಸಂಘಕ್ಕೆ ವ್ಯವಸ್ಥಿತವಾದ ಮಂದಿರದ ಅಗತ್ಯವಿದೆ ಎಂದು ತೀರ್ಮಾನಿಸಿ 1996 ರಲ್ಲಿ ಗಾಯತ್ರಿ ಮಂದಿರದ ನಿರ್ಮಾಣಕ್ಕೆ ಸಮಾಜ ಬಾಂಧವರು ಕಟ್ಟಡನಿರ್ಮಾಣಕ್ಕೆ ಬುನಾದಿ ಹಾಕಿದ್ದು 1999 ರಲ್ಲಿ ಬಳಕೆಗೆ ಸಿದ್ಧಗೊಂಡಿತು. ಆಧುನಿಕ ಸೌಲಭ್ಯದೊಂದಿಗೆ ಸುಮಾರು 2-3 ಸಾವಿರ ಜನರಿಗೆ ವ್ಯವಸ್ಥೆಮಾಡಬಹುದಾಗಿರುತ್ತದೆ. ತಾಲ್ಲೂಕಿನ ವಿಪ್ರರ ದೇಣಿಗೆ ರೂ. 60 ಲಕ್ಷ ಮೀರಿದ್ದು ದಾನಿಗಳ ಔದಾರ್ಯವನ್ನು ತೋರಿಸುತ್ತದೆ. ಕಟ್ಟಡ ನಿಮಾಣಕ್ಕೆ ವೆಚ್ಚವಾಗಿರುವ ಮೊಬಲಗು ಸುಮಾರು ಒಂದು ಕೋಟಿ ರೂಪಾಯಿಗೂ ಮೀರಿದೆ. ಗಾಯತ್ರೀ ಮಂದಿರ ತಾಲ್ಲೂಕಿನ ವಿಪ್ರ ಬಾಂಧವರ ಶಕ್ತಿ ಕೇಂದ್ರವಾಗಿದೆ. ಹಾಗೂ ಸುತ್ತಲಿನ ನಾಲ್ಕಾರು ತಾಲ್ಲೂಕಿನಲ್ಲಿ ಎಲ್ಲೂ ಇಲ್ಲದ ವಿಶಾಲವಾದ, ಭವ್ಯವಾದ ಮಂದಿರವಾಗಿದೆ.