No products in the cart.

Contacts

92 Bowery St., NY 10013

thepascal@mail.com

+1 800 123 456 789

Category: ಸುದ್ದಿ

IMG-20260512-WA0009
ಸುದ್ದಿ

ಶ್ರೀ ಆದಿಶಂಕರಾಚಾರ್ಯರು ಮತ್ತು ಅದೈತ ತತ್ವ

ಬ್ರಾಹ್ಮಣ ಸಂಘ ತೀರ್ಥಹಳ್ಳಿ, ತೀರ್ಥಹಳ್ಳಿ ತಾಲೂಕು, ಮತ್ತು ಹಿರಿಯರ ಬಳಗ ಇವರ ಆಶ್ರಯದಲ್ಲಿ ಮೇ 17 ನೇ ತಾರೀಖಿನ ಭಾನುವಾರದಂದು ಗಾಯಿತ್ರಿ ಮಂದಿರದಲ್ಲಿ ಸಂಜೆ 4.30 ಗಂಟೆಗೆ ಪ್ರೊಫೆಸರ್ ಡಿ.ಎಸ್. ಸೋಮಶೇಖರ್, ನಿವೃತ್ತ ಪ್ರಾಂಶುಪಾಲರು,ಇವರು “ಶ್ರೀ ಆದಿಶಂಕರಾಚಾರ್ಯರು ಮತ್ತು ಅದೈತ ತತ್ವ”
ಎಂಬ ವಿಚಾರದ ಮೇಲೆ ಬೆಳಕು ಚೆಲ್ಲಲಿದ್ದಾರೆ. ಬ್ರಾಹ್ಮಣ ಸಂಘದ ಹಾಗೂ ಹಿರಿಯರ ಬಳಗದ ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರುತ್ತೇವೆ.

ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ

IMG-20260505-WA0002
ಸುದ್ದಿ

ಶಂಕರ ಜಯಂತಿ ಆಚರಣೆ

ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ತೀರ್ಥಹಳ್ಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶಂಕರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ವೈಶಾಖ ಶುದ್ಧ ಪಂಚಮಿ ದಿನಾಂಕ.21.04.2026 ರಂದು ನಡೆದ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಗಾಯತ್ರಿ ಹೋಮ, ಹಾಗೂ ಪವಮಾನ ಹೋಮವನ್ನು ನಡೆಸಲಾಯಿತು. ಹಾಗೂ ಶಾಂಕರ ತೃತ್ವ ಅಭಿಯಾನದಡಿ ವಿಶೇಷ ಧಾರ್ಮಿಕ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ, ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ತುಂಬರಮನೆ, ಪ್ರಧಾನ ಕಾರ್ಯದರ್ಶಿ ವಿ.ಸತೀಶ್, ಕೋಶಾಧಿಕಾರಿಗಳಾದ ಶ್ರೀ ವೆಂಕಟೇಶ್ ಕುಂಟುವಳ್ಳಿ ಹಾಗೂ ಧಾರ್ಮಿಕ ಸಮಿತಿಯ ಸಂಚಾಲಕರಾದ ಶ್ರೀ ಶಿವರಾಮ ಉಡುಪರು ಮತ್ತು ಉಪನ್ಯಾಸಕರಾದ ಶ್ರೀ ಮಹಿಪತಿ ಜೋಯ್ಸ್ ಶಿವಮೊಗ್ಗ, ಹಾಗೂ ಗೌರವ ಸ್ವೀಕರಿಸಲು ಆಯ್ಕೆಯಾದ ಸಮಾಜ ಬಾಂಧವರು ಉಪಸ್ಥಿತಿದ್ದರು.. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರೆವೇರಿಸಿ ಮಾತನಾಡುತ್ತಾ ಅಧ್ಯಕ್ಷರು ಈ ಕಾರ್ಯಕ್ರಮಗಳನ್ನು ಸಮಾಜ ಬಾಂಧವರ ಸಹಕಾರದೊಂದಿಗೆ ನಡೆಸಲಾಗುತ್ತಿದ್ದು, ಇದೇ ರೀತಿ ಸಂಘದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉದಾರ ದೇಣಿಗೆಯನ್ನು ನೀಡುವ ಮೂಲಕ ಸಂಘಟನೆಯನ್ನು ಭಲಪಡಿಸುವಂತೆ ಕೋರಿದರು. ಶಾಂಕರ ತೃತ್ವ ಅಭಿಯಾನದಡಿ ವಿಶೇಷ ಧಾರ್ಮಿಕ ಉಪನ್ಯಾಸವನ್ನು ನೀಡಿದ ಶಿವಮೊಗ್ಗದ ವೇ:ಭೂ:ಶ್ರೀ ಮಹಿಪತಿ ಜೋಯ್ಸ್ ರವರು ಶಂಕರರ ಅದ್ವೈತ ಸಿದ್ಧಾಂತದ ಬಗೆ, ಹಾಗೂ ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗಾಗಿ ಆ ದಿನಗಳಲ್ಲೇ ಶ್ರಮಿಸಿರುವುದನ್ನು ತಿಳಿಸಿ. ಅವರ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ತೀರಾ ಅಗತ್ಯವಿರುವುದಾಗಿಯೂ ಹಾಗೂ ಅವುಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ಆ ದಿನದಂದು ಬೆಳಿಗ್ಗೆ, 8.00ಗಂಟೆಗೆ ಸರಿಯಾಗಿ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು 10.00 ಗಂಟೆಗೆ, ಹೋಮಗಳ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷದಂತೆ ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ತಾವು ಕೈಗೊಂಡ ವೃತ್ತಿಗಳಲ್ಲಿ ಇತರರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿ ದುಡಿದ ಹಿರಿಯ ಸಮಾಜ ಬಾಂಧವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಂತೆ ಈ ಬಾರಿ 8 ಜನ ವಿವಿಧ ಕ್ಷೇತ್ರದ ಅರ್ಹ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಅವರುಗಳಿಗೆ ಹಾಗೂ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಬಾರಿ ಸಂಘದವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗೌರವ ಸ್ವೀಕರಿಸಿದ ಸಾಧಕರು

1. ಧಾರ್ಮಿಕ ಅರ್ಚಕ ಕ್ಷೇತ್ರ : ಹಾರೇಕೊಪ್ಪ ಸಭಾ ಶಾಸ್ತ್ರಿ, ವೆಂಕಟೇಶ ಶಾಸ್ತ್ರಿ, ಆರಗ
2. ಧಾರ್ಮಿಕ ಪೌರೋಹಿತ್ಯ ಕ್ಷೇತ್ರ : ವೇ:ಭೂ:ಶ್ರೀ ವೆಂಕಟರಮಣ ಅಡಿಗರು ನೇರಳೆ
3. ಸಾಂಸ್ಕೃತಿಕ ಕ್ಷೇತ್ರ : ಅನಂತಪದ್ಮನಾಭ ಸೋಮಯಾಜಿ (ತಮ್ಮಯ್ಯ ಭಟ್ಟರು)
4. ಸಾಮಾಜ ಸೇವಾ ಕ್ಷೇತ್ರ : ಎ ಎಸ್ ರಾಘವೇಂದ್ರ ಭಟ್ಟ
5. ಕ್ರೀಢಾ ಕ್ಷೇತ್ರ : ವೆಂಕಟರಮಣ ಕೆ.ಎಸ್ ಜಾವಳ್ಳಿ
6. ಪಾಕಶಾಸ್ತ್ರ ಕ್ಷೇತ್ರ : ಶ್ರೀ ಜಯರಾಮ ಭಟ್ಟರು
7. ಶ್ರಮಿಕ ಕ್ಷೇತ್ರ : ಶ್ರೀಮತಿ ಸವಿತಾ ಗುರುಮೂರ್ತಿ
8. ಶಿಕ್ಷಣ ಕ್ಷೇತ್ರ : ಹೆಚ್.ಎಂ. ಕೃಷ್ಣಮೂರ್ತಿ

ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ಮಕ್ಕಳು

1. ಸಾನ್ವಿ ಜೋಯ್ಸ್ : ಅಂತರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ.
2. ಸಂಹಿತಾ ಎನ್ ಉಡುಪ : ರಾಷ್ಟ್ರ ಮಟ್ಟದ ಒಲಿಂಪಿಕ್ ಸ್ಪರ್ಧೆಗಳಲ್ಲಿ ಯೋಗಾಸನ ವಿಭಾಗದಲ್ಲಿ ಬೆಳ್ಳಿ ಪದಕ, ರಾಜ್ಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಚಿನ್ನದ ಪದಕ.
3. ರಾಹುಲ್ ಭಾರದ್ವಾಜ್ : ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ 3 ಬಾರಿ ಪ್ರಥಮ ಸ್ಥಾನ, ಹಾಗೂ ಬೆಳ್ಳಿ ಪದಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ 2 ಬಾರಿ ದ್ವಿತೀಯ ಸ್ಥಾನ.

ಪ್ರಾರಂಭದಲ್ಲಿ ಶ್ರೀ ಗಣೇಶ್ ಉಡುಪರು ಕಮ್ಮಾರಹಳ್ಳಿ, ಇವರು ವೇದಘೋಷವನ್ನು ಹಾಗೂ ಶ್ರೀಮತಿ ಸ್ವಪ್ನಾ ಶಶಿಧರ ಭಟ್ಟ ರವರು ಪ್ರಾರ್ಥನೆಯನ್ನು ಮಾಡಿದರು. ಧಾರ್ಮಿಕ ಸಮಿತಿಯ ಸಂಚಾಲಕರಾದ ಶ್ರೀ ಶಿವರಾಮ ಉಡುಪರು ಸಭೆಯಲ್ಲಿ ಹಾಜರಿದ್ದ ಸರ್ವರನ್ನು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿ. ಸತೀಶ್ ವಂದಿಸಿದರು. ಹಾಗೂ ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀ ಬಿ.ಕೆ ವಾದಿರಾಜ್ ಮತ್ತು ಶ್ರೀಮತಿ ರೇಣುಕಾ ಹೆಗಡೆಯವರು ಜಂಟಿಯಾಗಿ ನೆರೆವೇರಿಸಿದರು.

ಶಂಕರ ಜಯಂತಿ 2026 ಕಾರ್ಯಕ್ರಮಗಳು

IMG_20260413_0002
ಸುದ್ದಿ

ಧಾರ್ಮಿಕ ಕಾರ್ಯಕ್ರಮಗಳು

ಗಣಹೋಮ, ಗಾಯತ್ರೀ ಹೋಮ ಪವಮಾನ ಹೋಮ, ಧಾರ್ಮಿಕ ಉಪನ್ಯಾಸ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9-00ರಿಂದ 10-30ರ ವರೆಗೆ ಮಹಿಳೆಯರಿಂದ ಶಂಕರ ಸ್ತುತಿ
ಶಂಕರಾಚಾರ್ಯಕೃತ ಗುರ್ವಷ್ಟಕಮ್ ಮತ್ತು ಚರ್ಪಟ ಪಂಜರಿಕಾ ಸ್ತೋತ್ರ ಪಠಣ (ಭಜಗೋವಿಂದಂ ಭಜಗೋವಿಂದಮ್…)

ಸಭಾ ಕಾರ್ಯಕ್ರಮ ಪೂರ್ವಾಹ್ನ : 10-30 ರಿಂದ
ಅಧ್ಯಕ್ಷತೆ : ಶ್ರೀ ತುಂಬರಮನೆ ಚಂದ್ರಶೇಖರ್ ಅಧ್ಯಕ್ಷರು, ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ತೀರ್ಥಹಳ್ಳಿ
ಧಾರ್ಮಿಕ ಉಪನ್ಯಾಸ : ಶ್ರೀ ವಿದ್ವಾನ್ ಎಸ್. ಮಹೀಪತಿ ಜೋಯ್ಸ್ ಶ್ರೀಶಾಂಕರ ತತ್ತ್ವ ಪ್ರಸಾರ ಅಭಿಯಾನ ಶೃಂಗೇರಿ
ವಿಷಯ :- ಶಾಂಕರರ ಸಂದೇಶ
ಉಪಸ್ಥಿತಿ : ಶ್ರೀ ಹೆಚ್.ಎಂ ಶಿವರಾಮ ಉಡುಪ ಸಂಚಾಲಕರು, ಧಾರ್ಮಿಕ ಸಮಿತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನ

ವಿಶೇಷ ಸೂಚನೆ

  • ಈ ಸಂದರ್ಭದಲ್ಲಿ ಮುಹೂರ್ತ ಇಲ್ಲದಿರುವುದರಿಂದ ಬ್ರಹ್ಮೋಪದೇಶ ಇರುವುದಿಲ್ಲ
  • ಕಾರ್ಯಕ್ರಮವು ದೇಣಿಗೆಯಿಂದಲೇ ನಡೆಯುವುದರಿಂದ ದಯವಿಟ್ಟು ಧನ–ಧಾನ್ಯ– ವಸ್ತು ರೂಪದಲ್ಲಿ ದೇಣಿಗೆ ನೀಡಿ ಸಹಕರಿಸಬೇಕಾಗಿ ವಿನಂತಿ.
  • ಸಮುದಾಯ ಬಾಂಧವರು ಗೃಹ ಕೈಗಾರಿಕೆಯಲ್ಲಿ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಈ ಸಮಾರಂಭದ ದಿನದಂದು ಅವಕಾಶ ಮಾಡಿಕೊಡಲಾಗಿದೆ.
  • ಧಾರ್ಮಿಕ ಪುಸ್ತಕ ಪ್ರದರ್ಶನ– ಮಾರಾಟವಿದೆ.

ಸಂಘದ ದೂರವಾಣಿ : 08181– 295664   ಮೊಬೈಲ್ : 9945681250
ಇ ಮೇಲ್ : brahamanasanghatth@gmail.com
ವೆಬ್ ಸೈಟ್ : www.brahmanasanghatth.com

default-logo-img-brahmana
ಸುದ್ದಿ

ಭಜನಾ ಸ್ಪರ್ಧೆ

ದಿನಾಂಕ:- 11-09-2022 ನೇ  ಭಾನುವಾರ ಬೆಳಗ್ಗೆ 10 ಗಂಟೆಗೆ ತಾಲ್ಲೂಕಿನ ವಿಪ್ರ ಬಾಂಧವರಿಗೆ ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಸರ್ವರಿಗೂ ಹಾರ್ದಿಕ ಸ್ವಾಗತ.

default-logo-img-brahmana
ಸುದ್ದಿ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ದಿನಾಂಕ;- 04-09-2022 ರ ಭಾನುವಾರ ಬೆಳಗ್ಗೆ 10-ಗಂಟೆಗೆ ವಿವಿಧ ಪರೀಕ್ಷೆಗಳಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಮತ್ತು ಪೂರ್ವಾಹ್ನ 11-30 ಕ್ಕೆ 2021-2022 ನೆ ಸಾಲಿನ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ ಸರ್ವರಿಗೂ ಆದರದ ಸ್ವಾಗತ