ಸುದ್ದಿ
ಮಾನ್ಯರೇ,
ಶ್ರಾವಣ ಮಾಸದ ಮೊದಲನೇ ಶುಕ್ರವಾರ ದಿನಾಂಕ 14.08.2026 ರಂದು ಗಾಯತ್ರೀ ಮಂದಿರದಲ್ಲಿ ಬೆಳಿಗ್ಗೆ 9.30 ರಿಂದ ನಮ್ಮ ಸಮಾಜ ಬಾಂಧವರಿಗಾಗಿ ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ದಿನ ಚಂಡಿಕಾ ಪಾರಾಯಣ ವನ್ನೂ ಸಹ ಹಮ್ಮಿಕೊಂಡಿದ್ದೇವೆ. ಆಸಕ್ತ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.
ತರಬೇಕಾದ ಸಾಮಗ್ರಿಗಳು:
1. ಕುಂಕುಮಾರ್ಚನೆಗೆ ಕುಂಕುಮ
2. ಅರ್ಚನೆ ಮಾಡಲು ತಟ್ಟೆ ಮತ್ತು ಹೂವು
3. ಲಲಿತಾ ಸಹಸ್ರನಾಮ ಪುಸ್ತಕ
ಕಾರ್ಯಕ್ರಮದ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಅಧ್ಯಕ್ಷರು ಮತ್ತು ಸದಸ್ಯರು
ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾ॥(ರಿ)
ಪ್ರಧಾನ ಕಾರ್ಯದರ್ಶಿ
ಸತೀಶ್. ವಿ.









