ಸುದ್ದಿ
35ನೇ ವರ್ಷದ ಸರ್ವ ಸದಸ್ಯರ ಸಭೆಯ ಆಹ್ವಾನ
ಸನ್ಮಾನ್ಯ ಸದಸ್ಯರೇ, ಶ್ರಾವಣ ಶುಕ್ಲ ಚೌತಿ ದಿನಾಂಕ 16-08-2026ನೇ ಭಾನುವಾರ ಬೆಳಿಗ್ಗೆ 11-30 ಘಂಟೆಗೆ ಗಾಯತ್ರಿ ಮಂದಿರದಲ್ಲಿ
ಸಂಘದ ಅಧ್ಯಕ್ಷರಾದ ಶ್ರೀತುಂಬರಮನೆ ಚಂದ್ರಶೇಖರ್ ಇವರ ಅಧ್ಯಕ್ಷತೆಯಲ್ಲಿ 2025-26 “ಸರ್ವ ಸದಸ್ಯರ ಸಭೆ” ಕರೆಯಲಾಗಿದೆ.
ತಾವು ದಯವಿಟ್ಟು ಸಕಾಲಕ್ಕೆ ಆಗಮಿಸಿ, ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.
ಕಾರ್ಯಕಾರೀ ಸಮಿತಿಯ ಅನುಮೋದನೆಯ ಮೇರೆಗೆ,
ಸತೀಶ ವಿ.
ಪ್ರಧಾನ ಕಾರ್ಯದರ್ಶಿ
ತೀರ್ಥಹಳ್ಳಿ
ದಿನಾಂಕ: 27-06-2026










