ಸುದ್ದಿ
ಆತ್ಮೀಯರೇ,
ಜೂನ್ ತಿಂಗಳ 6 ಮತ್ತು 7 ನೇ ತಾರೀಖಿನಂದು ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಸನ್ನಿಧಾನಂಗಳವರು ತೀರ್ಥಹಳ್ಳಿ ಗೆ ಆಗಮಿಸಲಿದ್ದು, ನಮ್ಮ ಗಾಯತ್ರೀ ಮಂದಿರದಲ್ಲಿ ದಿನಾಂಕ 06.06.2026 ರ ಶನಿವಾರದಂದು ರಾತ್ರಿ 8.30 ರಿಂದ ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ ಮಾಡುವುದೆಂದು ಸಂಘಟಕರು ನಿರ್ಧರಿಸಿರುತ್ತಾರೆ. ಈ ಕಾರ್ಯಕ್ರಮ ದಲ್ಲಿ ತಾವೆಲ್ಲರೂ ಭಾಗವಹಿಸಬೇಕಾಗಿ ತಮ್ಮಲ್ಲಿ ನಮ್ರ ಮನವಿ. ಇದೇ ದಿನ ಸಂಜೆ 5.30 ಕ್ಕೆ ಕಲ್ಲಾರೆ ಗಣಪತಿ ದೇವಸ್ಥಾನದ ಮುಂಬಾಗದಲ್ಲಿ ಗುರುಗ಼ಳನ್ನು ಎದುರುಗೊಳ್ಳುವ ಕಾರ್ಯಕ್ರಮ ದಲ್ಲೂ ತಾವೆಲ್ಲರೂ ಉಪಸ್ಥಿತರಿರಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ.








